'ಜಾಗ್ವಾರ್' ನಲ್ಲಿ ಬರಲಿದ್ದಾರೆ ಬಾಲಿವುಡ್ ತಾರೆ ಕತ್ರಿನಾ

ಕತ್ರಿನಾ ಕೈಫ್ ಅವರನ್ನು ಕರೆತರಲು ಹಲವಾರು ದಕ್ಷಿಣ ಭಾರತದ ಚಿತ್ರರಂಗದ ದಿಗ್ಗಜರು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ನಿಖಿಲ್ ಕುಮಾರ್ ಅವರ ಜಾಗ್ವಾರ್ ಗೆ
ಕತ್ರಿನಾ ಕೈಫ್
ಕತ್ರಿನಾ ಕೈಫ್
Updated on

ಬೆಂಗಳೂರು: ಕತ್ರಿನಾ ಕೈಫ್ ಅವರನ್ನು ಕರೆತರಲು ಹಲವಾರು ದಕ್ಷಿಣ ಭಾರತದ ಚಿತ್ರರಂಗದ ದಿಗ್ಗಜರು ಪ್ರಯತ್ನಿಸಿದ್ದಾರೆ. ಆದರೆ ಈ ಪ್ರಯತ್ನ ನಿಖಿಲ್ ಕುಮಾರ್ ಅವರ ಜಾಗ್ವಾರ್ ಗೆ ಸಿದ್ಧಿಸಿದೆ. ಮಹದೇವ್ ನಿರ್ದೇಶನದ ಈ ಸಿನೆಮಾ ಸೆಟ್ಟೇರಿದಾಗಿಲಿಂದಲೂ ಒಂದಲ್ಲ ಒಂದು ರೀತಿಯಲ್ಲಿ ಸುದ್ದಿ ಮಾಡುತ್ತಿದೆ.

ಅಲ್ಲದೆ ಖ್ಯಾತ ತೆಲುಗು ನಟ ಜಗಪತಿ ಬಾಬು ಅವರು ಕೂಡ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ. ಕತ್ರಿನಾ ಕೈಫ್ ಅವರಿಗೆ ಪೂರ್ಣ ಪ್ರಮಾಣದ ನಟನೆ ಇಲ್ಲದಿದ್ದರೂ ಒಂದು ಹಾಡಿಗಂತೂ ಹೆಜ್ಜೆ ಹಾಕಲಿದ್ದಾರೆ ಎನ್ನಲಾಗಿದೆ. "ನಿಖಿಲ್ ಸಿನೆಮಾದ ಭಾಗವಾಗಲು ಕತ್ರಿನಾ ಆಸಕ್ತಿ ತೋರಿದ್ದಾರೆ. ಅವರು ಸ್ಕ್ರಿಪ್ಟ್ ಬಗ್ಗೆ ಚರ್ಚಿಸುತ್ತಿದು, ವಾಣಿಜ್ಯಾತ್ಮಕ ಅಂಶಗಳು ಅಂತಿಮವಾದ ಮೇಲೆ ಅಧಿಕೃತವಾಗುತ್ತದೆ" ಎಂದು ತಿಳಿಸುತ್ತಾರೆ ಕಾರ್ಯಕಾರಿ ನಿರ್ಮಾಪಕ ಸುನಿಲ್ ಗೌಡ.

ನಟಿ ದಕ್ಷಿಣ ಭಾರತದಲ್ಲಿ ಸರಿಯಾದ ಸಿನೆಮಾ ಆಯ್ಕೆ ಮಾಡಲು ಹವಣಿಸುತ್ತಿದ್ದರಂತೆ, "ನಾವು ಕತ್ರಿನಾ ಅವರನ್ನು ಕೇಳಿದಾಗ, ತಾವೇ ಏಕಾಗಬೇಕು ಎಂಬ ಮರು ಪ್ರಶ್ನೆ ಹಾಕಿದರಂತೆ ಕತ್ರಿನಾ. ನಾವು ಸಿನೆಮಾ ವಿಷಯವನ್ನು ವಿವರಿಸಿದಾಗ ಅವರು ಆಸಕ್ತಿ ತೋರಿದರು" ಎನ್ನುತಾರೆ ಸುನಿಲ್.

"ಅವರು ಬಾಲಿವುಡ್ ನಲ್ಲಿ ಅತಿ ದೊಡ್ಡ ತಾರೆಯಾಗಿರುವುದರಿಂದ ಮೊದಲೇ ಅವರ ದಿನಾಂಕ ತೆಗೆದುಕೊಳ್ಳಬೇಕು. ಚಿತ್ರೀಕರಣಕ್ಕೆ ಏಪ್ರಿಲ್ ನಲ್ಲಿ ಅವರ ೮ ದಿನಗಳ ಸಮಯ ಬೇಕು. ಅವರು ನಮಗೆ ಕಾಲ್ ಶೀಟ್ ನೀಡಲು ಸಿದ್ಧರಾಗಿದ್ದಾರೆ" ಎಂದು ವಿವರಿಸುತ್ತಾರೆ.

ಜನವರಿ ೪ ರಿಂದ ಚಿತ್ರೀಕರಣ ಪ್ರಾರಂಭವಾಗಲಿದ್ದು, ನಾಯಕ ನಟಿಯರ ಆಯ್ಕೆ ಪೂರ್ಣಗೊಳ್ಳಬೇಕಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com