
ತನಗೆ ಸ್ಫೂರ್ತಿ ನೀಡಿದ ನೆಚ್ಚಿನ ನಟ ಅಮೀರ್ ಖಾನ್ ಅವರನ್ನು ಭೇಟಿ ಮಾಡಿದ ನಿಹಾಲ್ ಬಿಟ್ಲಾ ಅವರಿಗೆ ಕನಸು ನನಸಾದ ದಿನ! ಪ್ರೊಗೇರಿಯಾ ಎಂಬ ವಿರಳ ಆನುವಂಶಿಕ ಖಾಯಿಲೆಯಿಂದ ನರಳುತ್ತಿರುವ ನಿಹಾಲ್ ಬಿಟ್ಲಾ ಬಾಲಿವುಡ್ ನಟನನ್ನು ಭೇಟಿ ಮಾಡಲು ಸಾಧ್ಯವಾಗಿದ್ದು 'ಹ್ಯೂಮನ್ಸ್ ಆಫ್ ಬಾಂಬೆ' ಎಂಬ ಫೇಸ್ಬುಕ್ ಪುಟದಿಂದ.
ವೈರಲ್ ಆಗಿದ್ದ ಈ ಫೇಸ್ಬುಕ್ ಪೋಸ್ಟ್ ನಲ್ಲಿ ಬಿಟ್ಲಾ, ಅಮೀರ್ ಖಾನ್ ಅವರ ಸಿನೆಮಾ 'ತಾರೆ ಜಮೀನ್ ಪರ್' ತಮಗೆ ಸ್ಫೂರ್ತಿ ಎಂದು ಬರೆದುಕೊಂಡಿದ್ದರು ಮತ್ತು ಅವರನ್ನು ವೈಯಕ್ತಿವಾಗಿ ಭೇಟಿ ಮಾಡುವ ಇಂಗಿತ ವ್ಯಕ್ತಪಡಿಸಿದ್ದರು.
ಇದನ್ನು ಗಮನಿಸಿದ್ದ ಸುಪರ್ಸ್ಟಾರ್ ಅಮೀರ್, ನಿಹಾಲ್ ಅವರ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದರು. "ನಿಮ್ಮ ಅನುಕೂಲ ತಿಳಿಸಿ ನಾನೇ ಬಂದು ಭೇಟಿ ಮಾಡುತ್ತೇನೆ. ನಿಮಗೆ ತಾರೆ ಜಮೀನ್ ಪರ್ ಇಷ್ಟ ಎಂದು ತಿಳಿದು ಖುಷಿಯಾಯಿತು" ಎಂದು ಬರೆದಿದ್ದರು.
ಪ್ರೊಗೇರಿಯಾ ರೋಗದಿಂದ ಬಳಲುವವರು ಅತಿ ಬೇಗನೆ ವಯಸ್ಸಾಗಿ ಅವಧಿಗೂ ಮುಂಚಿತವಾಗಿ ಮರಣ ಹೊಂದುವ ಅಪಾಯ ಎದುರಿಸುತ್ತಾರೆ.
ನಟನನ್ನು ಭೇಟಿ ಮಾಡಿದ ನಿಹಾಲ್ ಉಡುಗೊರೆಗಳನ್ನು ಪರಸ್ಪರ ಬದಲಾಯಿಸಿಕೊಂಡಿದ್ದಾರೆ. ನಂತರ ಹೊಸದೊಂದು ಪೋಸ್ಟ್ ಬರೆದ ನಿಹಾಲ್ "ಅಮೀರ್ ಅಂಕಲ್ ಧನ್ಯವಾದಗಳು. ನನ್ನ ಕನಸು ನನಸಾಯಿತು" ಎಂದು ಬರೆದಿದ್ದಾರೆ.
Advertisement