'ಕಥೆ ಚಿತ್ರಕಥೆ...', ತೆಲುಗು ರಿಮೇಕ್ ಅಲ್ಲ ಎಂದ ನಿರ್ದೇಶಕ

ತಮ್ಮ ನಿರ್ದೇಶನದ ಮೂರನೆ ಸಿನೆಮಾ 'ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ' ಹೊಸವರ್ಷಕ್ಕೆ ಬಿಡುಗಡೆಯಾಗುತ್ತಿರುವುದಕ್ಕೆ ನಿರ್ದೇಶಕ ಶ್ರೀನಿವಾಸ ರಾಜು ಅತೀವ
'ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ' ಸಿನೆಮಾದಲ್ಲಿ ಕೋಮಲ್
'ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ' ಸಿನೆಮಾದಲ್ಲಿ ಕೋಮಲ್

ಬೆಂಗಳೂರು: ತಮ್ಮ ನಿರ್ದೇಶನದ ಮೂರನೆ ಸಿನೆಮಾ 'ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ' ಹೊಸವರ್ಷಕ್ಕೆ ಬಿಡುಗಡೆಯಾಗುತ್ತಿರುವುದಕ್ಕೆ ನಿರ್ದೇಶಕ ಶ್ರೀನಿವಾಸ ರಾಜು ಅತೀವ ಸಂತಸರಾಗಿದ್ದಾರೆ.

ಇದು ತೆಲುಗು ಸಿನೆಮಾ 'ಗೀತಾಂಜಲಿ' ಸಿನೆಮಾದ ರಿಮೇಕ್ ಎಂದೇ ಹೇಳಲಾಗುತ್ತಿತ್ತು. ಆದರೆ ಇದಕ್ಕೆ ಸ್ಪಷ್ಟೀಕರಣ ನೀಡಿರುವ ಅವರು ಇದು ರಿಮೇಕ್ ಅಲ್ಲ ಎಂದಿದ್ದಾರೆ. "ತೆಲುಗು ಸಿನೆಮಾ ಆಗುವುದಕ್ಕೆ ಮುಂಚಿತವಾಗಲೇ ನಾನು ಕಥೆಗಾರನಿಂದ ಈ ಕಥೆ ಕೇಳಿದ್ದೆ. ಎನ್ನುವ ಅವರು ನಾನು 'ಶಿವಂ' ನಲ್ಲಿ ಬ್ಯುಸಿಯಾಗಿದ್ದರಿಂದ ಆ ಯೋಜನೆ ಕೈಗೆತ್ತಿಕೊಳ್ಳಲಾಗಲಿಲ್ಲ. ಕಿರಣ್ ಅವರ ತೆಲುಗಿನ ಚೊಚ್ಚಲ ಚಿತ್ರಕ್ಕೆ ಕಥೆ ಬರೆದವರು ಕೋಣ ವೆಂಕಟ್.

"ಆ ಕಥೆಗಾರ ಕಾಯಲು ಸಿದ್ಧವಿರಲಿಲ್ಲ ಆದುದರಿಂದ ಅವರನ್ನು ನನ್ನ ಗೆಳೆಯನಿಗೆ ಪರಿಚಯಿಸಿದೆ. ಆಗ 'ಗೀತಾಂಜಲಿ' ಹೊರಬಂತು. ನಂತರ ನಾನು ಎಲ್ಲಿಂದ ಬಿಟ್ಟಿದ್ದೆನೋ ಅಲ್ಲಿಂದಲೇ ಕನ್ನಡ ಸಿನೆಮಾ ನಿರ್ದೇಶನಕ್ಕೆ ಇಳಿದಿದ್ದೇನೆ. ನನಗೆ ಗೀತಾಂಜಲಿ ರಿಮೇಕ್ ಮಾಡುವ ಯಾವುದೇ ಇಚ್ಛೆಯಿಲ್ಲ" ಎನ್ನುತ್ತಾರೆ.

ರಾಜು ಅವರು 'ಶಿವಂ'ಗಿಂತಲೂ ಮುಂಚಿತವಾಗಿ 'ದಂಡುಪಾಳ್ಯ' ನಿರ್ದೇಶಿಸಿದ್ದರು. ಪೂಜಾ ಗಾಂಧಿ ಬಿಗ್ ಬಾಸ್ ನಿಂದ ಹೊರಬಂದ ಮೇಲೆ ದಂಡು ಪಾಳ್ಯ ಎರಡನೆ ಭಾಗ ನಿರ್ದೇಶಿಸುವುದಕ್ಕೂ ರಾಜು ಸಿದ್ದರಾಗಿದ್ದಾರೆ.

ನಾಳೆ ಬಿಡುಗಡೆಯಾಗಲಿರುವ 'ಕಥೆ ಚಿತ್ರಕಥೆ ನಿರ್ದೇಶನ ಪುಟ್ಟಣ್ಣ'ದಲ್ಲಿ ಕೋಮಲ್ ಮತ್ತು ಪ್ರಿಯಾಮಣಿ ಮುಖ್ಯನಟರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com