
ಬೆಂಗಳೂರು: ಎ ಎಂ ಆರ್ ರಮೇಶ್ ಅವರ ಮುಂದಿನ ದ್ವಿಭಾಷಾ ಸಿನೆಮಾ(ಕನ್ನಡ ಮತ್ತು ತಮಿಳು) ದಿನ ಕಳೆದಂತೆ ದೊಡ್ಡದಾಗುತ್ತಿದೆ. ಅರ್ಜುನ್ ಸರ್ಜಾ ತನಿಕಾಧಿಕಾರಿಯ ಪಾತ್ರ ನಿರ್ವಹಿಸಲು ಈಗಾಗಲೇ ಒಪ್ಪಿಕೊಂಡಿದ್ದಾರೆ. ಶಾಮ್ ಮುಖ್ಯ ವಿಲನ್ ಪಾತ್ರಕ್ಕೆ ಒಪ್ಪಿಕೊಂಡಿದ್ದಾರೆ.
ಈಗ ಅರ್ಜುನ್ ಸರ್ಜಾ ಸಿನೆಮಾಗೆ ಬಾಲಿವುಡ್ ತಾರೆ ಮನಿಷಾ ಕೊಯಿರಾಲಾ ಹೆಸರನ್ನು ರಮೇಶ್ ಅವರಿಗೆ ಸೂಚಿಸಿದ್ದಾರೆ. ಈ ಹಿಂದೆ ಶಂಕರ್ ಅವರ ಮುದಲ್ವನ್ (೧೯೯೯) ಸಿನೆಮಾದಲ್ಲಿ ಅರ್ಜುನ್ ಸರ್ಜಾ ಮತ್ತು ಮನಿಷಾ ಕೊಯಿರಾಲಾ ಜೋಡಿ ಒಟ್ಟಿಗೆ ನಟಿಸಿತ್ತು. ಅರ್ಜುನ್ ಸರ್ಜಾ ಮನಿಷಾ ಕೊಯಿರಾಲಾ ಅವರಿಗೆ ಈ ಬಗ್ಗೆ ತಿಳಿಸಿದ್ದು, ಮನಿಷಾ ಇದಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಅಧಿಕೃತ ಒಪ್ಪಂದವಾಗಬೇಕಷ್ಟೆ.
Advertisement