
ಹುಬ್ಬಳ್ಳಿ: ನಾನು ಸದ್ಯಕ್ಕೆ ಯಾವ ರಾಜಿಕೀಯ ಪಕ್ಷದ ಜೊತೆಗೂ ಗುರುತಿಸಿಕೊಂಡಿಲ್ಲ ಎಂದು ಮಂಗಳವಾರ ತಿಳಿಸಿರುವ ಪೂಜಾ ಗಾಂಧಿ, ಮತ್ತೆ ರಾಜಕೀಯಕ್ಕೆ ಮರಳುವ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಅಭಿನೇತ್ರಿ ಸಿನೆಮಾ ನಿರ್ಮಾಣ ಮತ್ತು ನಟನೆಯಲ್ಲಿ ಇಷ್ಟು ದಿನ ಕಾರ್ಯನಿರತನಾಗಿದ್ದೆ ಎಂದು ವರದಿಗಾರರಿಗೆ ತಿಳಿಸಿರುವ ಪೂಜಾ, ಲೋಕಸಭಾ ಚುನಾವಣೆಯ ದಯನೀಯ ಸೋಲಿನ ನಂತರ ಎದೆಗುಂದಿಲ್ಲ ಎಂದಿದ್ದಾರೆ. "ನಾನು ರಾಯಚೂರಿನ ಜನತೆಯ ಜೊತೆಗೆ ಸದಾ ಸಂಪರ್ಕದಲ್ಲಿದ್ದೇನೆ" ಎಂದಿದ್ದಾರೆ.
ಅಭಿನೇತ್ರಿ ಬಗ್ಗೆಯೂ ಮಾತನಾಡಿದ ಪೂಜಾ "ಈ ಸಿನೆಮಾ ಕಲ್ಪಾನಾ ಅವರ ಜೀವನದಿಂದ ಸ್ಫೂರ್ತಿ ಪಡೆದಿದ್ದರೂ ಇದು ಸಂಪೂರ್ಣ ಕಲ್ಪನಾ ಜೀವನಚಿತ್ರಣ ಆಧಾರಿತವಲ್ಲ. ಚಲನಚಿತ್ರವನ್ನು ನಿರ್ಮಾಣ ಮಾಡುವುದು ನನ್ನ ಕನಸಾಗಿತ್ತು. ಈ ಚಿತ್ರಕ್ಕಾಗಿ ಬಹಳಷ್ಟು ಸಂಶೋಧನೆ ನಡೆಸಿದ್ದೇವೆ ಹಾಗೂ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದೇವೆ" ಎಂದರು.
Advertisement