ರಿಕ್ಕಿ ಕೇಜ್
ರಿಕ್ಕಿ ಕೇಜ್

ಗ್ರ್ಯಾಮಿ ಪ್ರಶಸ್ತಿ ಗೆದ್ದ ಬೆಂಗಳೂರು ಮೂಲದ ರಿಕ್ಕಿ ಕೇಜ್

ರಿಕ್ಕಿ ಕೇಜ್ ಅವರ ಸಂಗೀತ ಆಲ್ಬಂ 'ವಿಂಡ್ಸ್ ಆಫ್ ಸಂಸಾರ' ೫೭ ನೆ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ

ಲಾಸ್ ಏಂಜಲೀಸ್: ಬೆಂಗಳೂರು ಮೂಲದ ರಿಕ್ಕಿ ಕೇಜ್ ಅವರ ಸಂಗೀತ ಆಲ್ಬಂ 'ವಿಂಡ್ಸ್ ಆಫ್ ಸಂಸಾರ' ೫೭ ನೆ ಗ್ರ್ಯಾಮಿ ಪ್ರಶಸ್ತಿ ಸಮಾರಂಭದಲ್ಲಿ ಅತ್ಯುತ್ತಮ 'ಹೊಸ ಅಲೆಯ ಆಲ್ಬಂ' ಪ್ರಶಸ್ತಿ ಗೆದ್ದಿದೆ. ದಕ್ಷಿಣ ಆಫ್ರಿಕಾದ ಕೊಳಲುವಾದಕ ವೌಟರ್ ಕೆಲ್ಲೆರ್ಮ್ಯಾನ್ ಅವರ ಜೊತೆ ಸಹ ನಿರ್ಮಿಸಿರುವ ಈ ಆಲ್ಬಮ್ ಭಾರತ ಮತ್ತು ಆಫ್ರಿಕಾ ಖಂಡದ ಶಬ್ದ ನಾದವನ್ನು ಸೆರೆ ಹಿಡಿದಿತ್ತು ಹಾಗೂ ಅಮೇರಿಕಾದಲ್ಲಿ ಕಳೆದ ವರ್ಷ ಅತ್ಯುತ್ತಮ ಮಾರಾಟ ಕಂಡಿತ್ತು.

ಇದು ಕೇಜ್ ಅವರ ೧೪ ನೆಯ ಆಲ್ಬಂ ಮತ್ತು ಇದರಲ್ಲಿ ಮಹಾತ್ಮ ಗಾಂಧಿಗೆ ಗೌರವ ಕೂಡ ಸಲ್ಲಿಸಲಾಗಿದೆ.

ಮತ್ತೊಬ್ಬ ಬೆಂಗಳೂರು ಮೂಲದ ಸಂಗೀತಕಾರ ಪ್ರಕಾಶ್ ಸೊಂಟಕ್ಕೆ ಆ ಆಲ್ಬಂ ನ ಸಹ ಸಂಗೀತಕಾರರು.

'ಐ ಆಮ್ ಮಲಾಲಾ' ಗೂ ಗ್ರ್ಯಾಮಿ ಪ್ರಶಸ್ತಿ


"ಐ ಆಮ್ ಮಲಾಲ" ಕೇಳು ಪುಸ್ತಕ (ಆಡಿಯೋ ಬುಕ್) ಅತ್ಯುತ್ತಮ ಮಕ್ಕಳ ಆಲ್ಬಂ ವಿಭಾಗದಲ್ಲಿ ಪ್ರಶಸ್ತಿ ಪಡೆದಿದೆ. ಇದು ಕೂಡ ಭಾರತೀಯ ಮೂಲದ ನೀಲ ವಾಸ್ವಾನಿ ಧ್ವನಿಯಲ್ಲಿ ಮೂಡಿ ಬಂದಿರುವುದು ವಿಶೇಷ.

Related Stories

No stories found.

Advertisement

X
Kannada Prabha
www.kannadaprabha.com