
ಲಂಡನ್: ಅಂತರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಭಾರತದ ಸಿನೆಮಾ 'ದ ಲಂಚ್ ಬಾಕ್ಸ್' ಬಿ ಎ ಎಫ್ ಟಿ ಎ ೨೦೧೫ ಪ್ರಶಸ್ತಿಗಳ 'ಇಂಗ್ಲಿಶೇತರ ಸಿನೆಮಾ'ಗಳ ವಿಭಾಗದಲ್ಲಿ ಪ್ರಶಸ್ತಿ ಪಡೆಯಲು ವಿಫಲವಾಗಿದೆ. ಪೋಲಿಶ್-ಡ್ಯಾನಿಶ್ ಸಿನೆಮಾ 'ಇಡಾ' ಈ ಪ್ರಶಸ್ತಿಯನ್ನು ಗಳಿಸಿದೆ.
ಬ್ರಿಟಿಶ್ ಅಕಾಡೆಮಿ ಆಫ್ ಫಿಲ್ಮ್ ಅಂಡ್ ಟೆಲಿವಿಶನ್ ಆರ್ಟ್ಸ್ (ಬಾಫ್ಟಾ) ತನ್ನ ಅಧಿಕೃತ ಅಂತರ್ಜಾಲ ತಾಣದಲ್ಲಿ ತನ್ನ ೬೮ ನೆ ಆವೃತ್ತಿಯ ಪ್ರಶಸ್ತಿಗಳನ್ನು ಘೋಷಿಸಿದೆ.
ಇರ್ಫಾನ್ ಖಾನ್ ಮತ್ತು ನಿಮ್ರತ್ ಕೌರ್ 'ದ ಲಂಚ್ ಬಾಕ್ಸ್' ಸಿನೆಮಾದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು.
ಸ್ಟೀಫನ್ ಫ್ರೆ ನಡೆಸಿಕೊಟ್ಟ ರಾಯಲ್ ಒಪೇರಾ ಹೌಸ್ ನಲ್ಲಿ ನಡೆದ ಅಂತರಾಷ್ಟ್ರೀಯ ತಾರೆಗಳು ನೆರೆದಿದ್ದ ಕಾರ್ಯಕ್ರಮದಲ್ಲಿ ಭಾನುವಾರ ಪ್ರಶಸ್ತಿಗಳನ್ನು ಘೋಷಿಸಲಾಗಿದೆ.
Advertisement