'ರೋಮ್ಯಾಂಟಿಕ್ ಕ್ರೈಂ'ಗೆ ಯು/ಎ ಸರ್ಟಿಫಿಕೇಟ್
ಪ್ರಾದೇಶಿಕ ಸೆನ್ಸಾರ್ ಮಂಡಳಿ `ಒಂದು ರೊಮ್ಯಾಂಟಿಕ್ ಕ್ರೈಂ ಕಥೆ' ಚಿತ್ರಕ್ಕೆ ಯು/ ಎ ಅರ್ಹತಾ ಪತ್ರ ನೀಡುವುದರ ಜೊತೆಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದೆ.
ಇಂದಿನ ಯುವ ಪೀಳಿಗೆ ಸಾಗುತ್ತಿರುವ ದಾರಿಯನ್ನು ಎತ್ತಿ ತೋರಿಸಿ ಅದರ ದುಷ್ಪರಿಣಾಮ ತಿಳಿಸುವ ಕಥಾ ಹಂದರ ಹೊಂದಿರುವ ಈ ಚಿತ್ರದ ಬಗ್ಗೆ ಮಂಡಳಿ ಸದಸ್ಯರು ಖುಷಿಗೊಂಡಿದ್ದಾರೆ. ಸಮಾಜಕ್ಕೆ ಇಂತಹ ಸಿನಿಮಾಗಳು ಅವಶ್ಯಕ ಎಂದು ಸೆನ್ಸಾರ್ ಸದಸ್ಯರು ಹೇಳಿದ್ದಾರೆ.
`ಒಂದು ರೊಮ್ಯಾಂಟಿಕ್ ಕ್ರೈಂ ಕಥೆ' ಮಲಿನಿನೇಣಿ ಪ್ರೊಡಕ್ಷನ್ ಅಡಿಯಲ್ಲಿ ಡಾಕ್ಟರ್ ಮಲಿನೇಣಿ ಲಕ್ಷ್ಮಯ್ಯ ಅವರು ನಿರ್ಮಾಣ ಮಾಡಿರುವ ಚಿತ್ರ. ಶ್ಯಾಮ್ ಜೆ. ಚೈತನ್ಯ ಈ ಚಿತ್ರದ ನಿರ್ದೇಶಕರು.
ತಾರಾಗಣದಲ್ಲಿ `ಗೊಂಬೆಗಳ ಲವ್' ಸಿನೆಮಾದ ನಾಯಕ ಅರುಣ್, ಅಶ್ವಿನಿ ಚಂದ್ರಶೇಖರ್, ಪೂಜಶ್ರೀ, ಸೋನಲ್, ಪ್ರಿಯಾಂಕ ಶುಕ್ಲ, ವಿನೋದ್, ಅರ್ಚನ ಹಾಗೂ ಇನ್ನಿತರರು ಇದ್ದಾರೆ. ಪ್ರಭು ಛಾಯಾಗ್ರಾಹಕರು. ರಿಶಾಲ್ ಸಾಯಿ ಅವರು ಗೀತ ರಚನೆಕಾರ ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಅವರ ನಾಲ್ಕು ಹಾಡುಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ