
ಬೆಂಗಳೂರು: ಜಗ್ಗೇಶ್, ರಕ್ಷಿತ್ ಶೆಟ್ಟಿ ಅಭಿನಯದ ಯೋಗರಾಜ್ ಭಟ್ ನಿರ್ದೇಶನದ 'ವಾಸ್ತುಪ್ರಕಾರ' ಬಿಡುಗಡೆಗೆ ಸಿದ್ಧವಾಗಿದೆ. ಹರಿಕೃಷ್ಣ ಸಂಗೀತ ಇರುವ ಈ ಸಿನೆಮಾದ ಆಡಿಯೋ ಬಿಡುಗಡೆಯಾಗಿದ್ದರೂ ಇನ್ನೂ ಜನರ ನಾಲಿಗೆಯ ಮೇಲೆ ಸರ ಸರ ಹರಿದಾಡುತ್ತಿಲ್ಲ. ಬಹುಷಃ ಈ ಕೊರತೆಯನ್ನು ನೀಗಿಸಲೋ ಏನೋ, ಯೋಗರಾಜ್ -ಹರಿಕೃಷ್ಣ ಜೋಡಿ ೨೦೧೪ ನ್ನು ಬಿಳ್ಕೊಟ್ಟು ಹೊಸ ವರ್ಷವನ್ನು ಆಹ್ವಾನಿಸಲು ಈ ಹೊಸ ಹಾಡೊಂದನ್ನು ಸೃಷ್ಟಿಸಿದ್ದಾರೆ. ವಾಸ್ತು ಪ್ರಕಾರದ ಪ್ರಚಾರಕ್ಕಾಗಿಯೇ ಮಾಡಿರುವಂತಿದ್ದರೂ ಈ ಹಾಡು, ೨೦೧೪ನೆ ಇಸವಿಯ ವಿವಿಧ ವಿವಾದಾತ್ಮಕ ಘಟನೆಗಳನ್ನು ಮೆಲಕು ಹಾಕಿದೆ.
ಸಿದ್ಧು, ಯಡ್ಡಿ, ಜಯಲಲಿತಾ, ಮೈತ್ರಿಯಿ ಗೌಡ, ಸನ್ನಿ ಲಿಯೋನ್, ನಿತ್ಯಾನಂದ, ರಾಘವೇಶ್ವರ, ಚರ್ಚ್ ಸ್ಟ್ರೀಟ್ ಬಾಂಬು, ಸದನದಲ್ಲಿ ವಿಡಿಯೋ ನೋಡಿದ್ದು, ಗಾಂದಿನಗರದ ರಿಮೇಕು ಎಲ್ಲವೂ ಈ ಹಾಡಿನಲ್ಲಿ ಬಂದು ಹೋಗುತ್ತದೆ. ಈ ಹಾಡನ್ನು ಯೋಗರಾಜ್ ಮತ್ತು ಹರಿಕೃಷ್ಣ ಹಾಡಿದ್ದಾರೆ. ಈ ಹಾಡಾದರೂ ಯೋಗರಾಜ್ ಅವರ ಹೊಸ ಸಿನೆಮಾಗೆ ಅವಶ್ಯಕ ಪ್ರಚಾರ ನೀಡುತ್ತದೆಯೆ ಕಾದು ನೋಡಬೇಕು.
Advertisement