ಗಿರೀಶ್ ಕಾಸರವಳ್ಳಿ ಕ್ಷಮೆ ಕೇಳಬೇಕು ಎಂದ ಸೆನ್ಸಾರ್ ಬೋರ್ಡ್

ಬಾಬು ಈಶ್ವರ್ ಪ್ರಸಾದ್ ಅವರ ಚೊಚ್ಚಲ ನಿರ್ದೇಶನದ 'ಗಾಳಿಬೀಜ' ...
ಗಾಳಿ ಬೀಜ ಸಿನೆಮಾದ ಸ್ಟಿಲ್
ಗಾಳಿ ಬೀಜ ಸಿನೆಮಾದ ಸ್ಟಿಲ್

ಬೆಂಗಳೂರು: ಬಾಬು ಈಶ್ವರ್ ಪ್ರಸಾದ್ ಅವರ ಚೊಚ್ಚಲ ನಿರ್ದೇಶನದ 'ಗಾಳಿಬೀಜ' ಚಲನಚಿತ್ರಕ್ಕೆ ಸೆನ್ಸಾರ್ ಮಂಡಲಿಯವರು (ಸಿ ಬಿ ಎಫ್ ಸಿ) ಚಲನಚಿತ್ರ ಅರ್ಥವಾಗಲಿಲ್ಲ ಎಂದು ಸರ್ಟಿಫಿಕೇಟ್ ನೀಡಲು ನಿರಾಕರಿಸಿದ್ದನ್ನು ತೀವ್ರವಾಗಿ ಟೀಕಿಸಿದ್ದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರು ಬರವಣಿಗೆಯಲ್ಲಿ ಕ್ಷಮಾಪಣೆ ಕೋರಬೇಕು ಎಂದು ಸೆನ್ಸಾರ್ ಮಂಡಲಿ ಆಗ್ರಹಿಸಿರುವುದು ಈಗ ವಿವಾದ ತೀವ್ರಗೊಂಡಿದೆ.

 "ಇಂತಹ ಹೇಳಿಕೆಗಳನ್ನು ಹಿರಿಯ ನಿರ್ದೇಶಕರಾದಂತ ಗಿರೀಶ್ ಕಾಸರವಳ್ಳಿಯವರಿಂದ  ನಿರೀಕ್ಷಿಸಿರಲಿಲ್ಲ. ಅವರಿಗೆ ಸಿ ಬಿ ಎಫ್ ಸಿ ನಿಯಮಗಳ ಬಗ್ಗೆ ಗೊತ್ತಿದೆ. ನನ್ನ ವಿರುದ್ಧ ಅವರ ಟೀಕೆ ಮಾಡಿದ್ದರೆ ಒಪ್ಪಿಕೊಳ್ಳಬಹುದಿತ್ತು ಆದರೆ ಅವರು ಸಿ ಬಿ ಎಫ್ ಸಿ ಸಂಸ್ಥೆಯ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. ನಮಗೆ ವಿಶ್ವ ಸಿನೆಮಾ ಅರ್ಥವಾಗುವುದಿಲ್ಲ ಎಂದು ಕಾಸರವಳ್ಳಿಯವರು ಹೇಳಿರುವುದು ಸರಿಯಲ್ಲ. ಆದುದರಿಂದ ಅವರು ಬರವಣಿಗೆಯಲ್ಲಿ ಕ್ಷಮಾಪಣೆ ಕೋರಬೇಕೆಂದು ಆಗ್ರಹಿಸುತ್ತೇನೆ" ಎಂದಿದ್ದಾರೆ ಸಿ ಬಿ ಎಫ್ ಸಿಯ ಪ್ರಾದೇಶಿಕ ಅಧಿಕಾರಿ ಎಂ ನಾಗೇಂದ್ರ ಸ್ವಾಮಿ.

ಈ ಹಿಂದೆ 96 ನಿಮಿಷದ ಗಾಳಿಬೀಜ ಫೀಚರ್ ಫಿಲಂ ಅಥವಾ ಸಾಕ್ಷ್ಯಚಿತ್ರವೋ ಗೊತ್ತಾಗುವುದಿಲ್ಲ. ಸಂಭಾಷಣೆ ಬಹಳ ಕಡಿಮೆ ಎಂಬತಹ ಕಾರಣಗಳನ್ನು ಕೊಟ್ಟು ಸಿನೆಮಾ ನೋಡಿದ್ದ ಮಂಡಲಿ ಸೆನ್ಸಾರ್ ಸರ್ಟಿಫಿಕೆಟ್ ನಿಡಲು ನಿರಾಕರಿಸಿತ್ತು.

ಇದರಿಂದ ಕುಪಿತಗೊಂಡಿರುವ ಸಿನೆಮಾ ನಿರ್ದೇಶಕರು ಸೆನ್ಸಾರ್ ಮಂಡಲಿಯ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಾಬು ಪ್ರಸಾದ್ ಅವರನ್ನು ಬೆಂಬಲಿಸಿರುವ ಟಿ ಎಸ್ ನಾಗಾಭರಣ, ಪ್ರಕಾಶ್ ಬೆಳವಾಡಿ ಮುಂತಾದವರು ಸೆನ್ಸಾರ್ ಮಂಡಲಿ ಎದುರು ಶೀಘ್ರದಲ್ಲೆ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com