
ಪ್ರತಿ ಸಂಚಿಕೆಯಲ್ಲಿ 3 ಸ್ಪರ್ಧಿಗಳು ಭಾಗವಹಿಸುತ್ತಾರೆ. ಈ ಮೂರೂ ಜನ ಒಬ್ಬರಿಗೊಬ್ಬರು ಪರಿಚಿತರಾಗೋದು 'ಡಿವೈಡೆಡ್' ವೇದಿಕೆಯ ಮೇಲೆ ಬಂದಾಗಲೇ. ಒಚ್ಚು ನಾಲ್ಕು ರೌಂಡ್‌ಗಳಲ್ಲಿ 10 ಪ್ರಶ್ನೆಗಳನ್ನು ಇಲ್ಲಿ ಸ್ಪರ್ಧಿಗಳು ಎದುರಿಸಬೇಕಾಗಿರುತ್ತೆ. ಮೊದಲನೇ ರೌಂಡ್‌ನಲ್ಲಿ 25 ಸಾವಿರ ಬಹುಮಾನದ ನಾಲ್ಕು ಪ್ರಶ್ನೆಗಳನ್ನು ಕೇಳಲಾಗುತ್ತೆ.
'ವೀಕೆಂಡ್ ವಿಥ್ ರಮೇಶ್' ಮತ್ತು 'ಲೈಫ್ ಸೂಪರ್ ಗುರೂ' ಜನಪ್ರಿಯತೆಯ ನಂತರ ಇದೀಗ 'ಡಿವೈಡೆಡ್' ಎಂಬ ಮತ್ತೊಂದು ನೂತನ ರಿಯಾಲಿಟಿ ಶೋಗೆ ಜೀ ಕನ್ನಡ ಸಜ್ಜಾಗಿದೆ.
ಆರ್.ಜೆ. ರೋಹಿತ್ ನಿರೂಪಣೆಯಲ್ಲಿ ಮೂಡಿಬರಲಿರುವ ಈ ಶೋ 10 ಲಕ್ಷ ರುಪಾಯಿಯ ಬಹುಮಾನವನ್ನು ಒಳಗೊಂಡಿದ್ದು, ಪ್ರತಿ ಸಂಚಿಕೆಯಲ್ಲಿ 3 ಸ್ಪರ್ಧಿಗಳು ಭಾಗವಹಿಸುತ್ತಾರೆ. ಈ ಮೂರೂ ಜನ ಒಬ್ಬರಿಗೊಬ್ಬರು ಪರಿಚಿತರಾಗೋದು 'ಡಿವೈಡೆಡ್' ವೇದಿಕೆಯ ಮೇಲೆ ಬಂದಾಗಲೇ.
ಒಟ್ಟು ನಾಲ್ಕು ರೌಂಡ್‌ಗಳಲ್ಲಿ 10 ಪ್ರಶ್ನೆಗಳನ್ನು ಇಲ್ಲಿ ಸ್ಪರ್ಧಿಗಳು ಎದುರಿಸಬೇಕಾಗಿರುತ್ತೆ. ಮೊದಲನೇ ರೌಂಡ್‌ನಲ್ಲಿ 25 ಸಾವಿರ ಬಹುಮಾನದ ನಾಲ್ಕು ಪ್ರಶ್ನೆಗಳನ್ನು ಕೇಳಲಾಗುತ್ತೆ. ಎರಡನೇ ರೌಂಡ್‌ನಲ್ಲಿ 50 ಸಾವಿರಕ್ಕೆ ಮೂರು ಪ್ರಶ್ನೆಗಳಿಗೆ ುತ್ತರಿಸಬೇಕು. ಮೂರನೇ ರೌಂಡ್‌ನಲ್ಲಿ 1 ಪ್ರಶ್ನೆಯನ್ನ ಸ್ಪರ್ಧಿಗಳು ಎದುರಿಸಬೇಕಾಗುತ್ತದೆ. ಇಲ್ಲಿ ಒಂದು ಪ್ರಶ್ನೆಗೆ ಮೂಲರು ಸ್ಫರ್ಧಿಗಳು ಒಟ್ಟಾಗಿ ಚರ್ಚಿಸಿ ಒಮ್ಮತಕ್ಕೆ ಬಂದು ಉತ್ತರಿಸಬೇಕು. ಇದಕ್ಕೆ 100 ಸೆಕೆಂಡುಗಳ ಕಾಲಾವಕಾಶವಿರುತ್ತೆ.
ಪ್ರಶ್ನೆಯೊಂದಕ್ಕೆ ಉತ್ತರಿಸಲು 100 ಸೆಕೆಂಡುಗಳ ರಿವರ್ಸ್ ಕೌಂಟಿಂಗ್ ಶುರುವಾಗಿರುತ್ತದೆ. ಸೆಕೆಂಡುಗಳು ಕಡಿಮೆಯಾದಷ್ಟು ಪ್ರಶ್ನೆಯ ಒಟ್ಟು ಮೊತ್ತದ ಹಣವೂ ಕಡಿತವಾಗುತ್ತದೆ. ಇಡೀ ಸ್ಪರ್ಧೆಟಲ್ಲಿ ಒಟ್ಟು 3 ಲೈಫ್‌ಲೈನ್‌ಗಳಿರುತ್ತವೆ. (ಎರಡು ತಪ್ಪು ಉತ್ತರಗಳಿಗೆ ಮತ್ತು 1 ಪ್ರಶ್ನೆಯನ್ನು 'ಪಾಸ್' ಮಾಡುವುದಕ್ಕೆ) ಅಂತಿಮವಾಗಿ ಮೂವರೂ ಸ್ಪರ್ಧಿಗಳು ಗೆಲ್ಲುವ ಹಣದಲ್ಲಿ ಯಾವ ಸ್ಫರ್ಧಿ ಎಷ್ಟು ಹಣ ಹಂಚಿಕೊಳ್ಳಬೇಕು? ಇದರಲ್ಲಿ ಯಾರ ಪಾಲು ಎಷ್ಟು? ಎಂಬುದನ್ನೂ ಸ್ಪರ್ಧಿಗಳೇ ನಿರ್ಧರಿಸಬೇಕು. ಅದಕ್ಕೂ 15 ಸೆಕೆಂಡುಗಳು ಒಮ್ಮತಕ್ಕೆ ಬರದೇ ಹೋದರೆ ಮತ್ತೆ 100 ಸೆಕೆಂಡುಗಳ ಲೆಕ್ಕದಲ್ಲಿ ಕಡಿತಗೊಳ್ಳುತ್ತದೆ. ಎಂಡೋಮಾಲ್ ಪ್ರೋಡಕ್ಷನ್ ಸಂಸ್ಥೆ 'ಡಿವೈಡೆಡ್' ಕಾರ್ಯಕ್ರಮದ ನಿರ್ಮಾಣ ಮಾಡುತ್ತಿದ್ದು. ಜ.3 ರಿಂದ ಶನಿವಾರ ಮತ್ತು ಭಾನುವಾರ ರಾತ್ರಿ 8 ರಿಂದ 9 ವರೆಗೆ ಪ್ರಸಾರವಾಗಲಿದೆ.
Advertisement