
ಬೆಂಗಳೂರು: ನಟ ದುನಿಯಾ ವಿಜಯ್ ಅವರಿಗೆ ವಿವಾದಗಳು ಹೊಸದೇನಲ್ಲ. ಈಗ 'ಮಿಸ್ಟರ್ & ಮಿಸಸ್ ರಾಮಾಚಾರಿ'ಯ ನಿರ್ಮಾಪಕ ಜಯಣ್ಣ ಅವರಿಗೆ ಬೆದರಿಕೆ ಕರೆ ಮಾಡಿ ಹೊಸ ವಿವಾದವೊಂದನ್ನ ಸೃಷ್ಟಿಸಿದ್ದಾರೆ. ಈ ನಿಟ್ಟಿನಲ್ಲಿ ನಿರ್ಮಾಪಕ ಜಯಣ್ಣ ಸಿ ಸಿ ಬಿ ಪೊಲೀಸರಿಗೆ ದೂರು ನೀಡಿದ್ದಾರೆ.
ಕಪಾಲಿ ಚಿತ್ರಮಂದಿರದ ಮಾಲಿಕರೂ ಆಗಿರುವ ಜಯಣ್ಣನವರಿಗೆ 'ಜಾಕ್ಸನ್' ಚಿತ್ರವನ್ನು ಪ್ರದರ್ಶಿಸಲು ವಿಜಯ್ ಕೇಳಿದ್ದಾರೆ ಎನ್ನಲಾಗಿದೆ. ಆದರೆ ಚಿತ್ರಮಂದಿರ 'ಶಿವಂ' ಸಿನೆಮಾಗೆ ಆಗಲೇ ಬುಕ್ ಆಗಿದ್ದರಿಂದ ಜಯಣ್ಣನವರು ನಿರಾಕರಿಸಿದ್ದಾರೆ. ಈ ವಾಗ್ವಾದದಲ್ಲಿ ದುನಿಯಾ ವಿಜಯ್, ಜಯಣ್ಣನವರಿಗೆ ಜೀವಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದಕ್ಕೆ ಪ್ರಕ್ರಿಯಿಸಿರುವ ದುನಿಯಾ ವಿಜಯ್, "ನನ್ನ ಮತ್ತು ಜಯಣ್ಣನವರ ಸಂಬಂಧ ಚೆನ್ನಾಗಿದೆ. ಜಯಣ್ಣನವರು ಚಲನಚಿತ್ರ ವಾಣಿಜ್ಯ ಮಂಡಲಿಗೆ ದೂರು ನೀಡಬೇಕಿತ್ತು. ನನಗೆ ಸಿ ಸಿ ಬಿ ಮೇಲೂ ನಂಬಿಕೆಯಿದೆ. ಇದನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲಿದ್ದೇವೆ" ಎಂದಿದ್ದಾರೆ.
Advertisement