ಕೊಲ್ಹಾಪುರ ಅಂತರರಾಷ್ಟ್ರೀಯ ಚಿತ್ರೋತ್ಸದಲ್ಲಿ `ಇಂಗಳೆ ಮಾರ್ಗ’ಪ್ರದರ್ಶನ

ವೈಷ್ಣೋದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಮಾಜ ಸೇವಕ ಹಾಗೂ...
ಚಿತ್ರತಂಡದ ಪರವಾಗಿ ನಟಿ ರೂಪಿಕಾ ಪ್ರಶಸ್ತಿ ಸ್ವೀಕರಿಸುತ್ತಿರುವುದು.
ಚಿತ್ರತಂಡದ ಪರವಾಗಿ ನಟಿ ರೂಪಿಕಾ ಪ್ರಶಸ್ತಿ ಸ್ವೀಕರಿಸುತ್ತಿರುವುದು.

ವೈಷ್ಣೋದೇವಿ ಕ್ರಿಯೇಷನ್ಸ್ ಲಾಂಛನದಲ್ಲಿ ಸಮಾಜ ಸೇವಕ ಹಾಗೂ ವಿಕಲಚೇತನ ಕ್ರೀಡಾಪಟು ಘನಶ್ಯಾಂ ಬಾಂಡಗೆ ಅವರು ನಿರ್ಮಿಸಿರುವ, ವಿಶಾಲ್‍ರಾಜ್ ನಿರ್ದೇಶನದ `ಇಂಗಳೆ ಮಾರ್ಗ’ ಚಿತ್ರ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಇತ್ತೀಚೆಗೆ ನಡೆದ 3ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನವಾಯಿತು.

ಸಾಮಾಜಿಕ ಸಂದೇಶವನ್ನು ನೀಡುವ 'ಇಂಗಳೆ ಮಾರ್ಗ' ಚಿತ್ರಕ್ಕೆ ತೀರ್ಪುಗಾರರ ವೀಶೇಷ ಪ್ರಶಸ್ತಿ ದೊರಕಿತು. ಚಿತ್ರತಂಡದ ಪರವಾಗಿ ನಟಿ ರೂಪಿಕಾ ಪ್ರಶಸ್ತಿ ಸ್ವೀಕರಿಸಿದರು.

ಈ ಚಿತ್ರ ಸರಜೂ ಕಾಟ್ಕರ್‌ ಅವರ 'ದೇವರಾಯ' ಎಂಬ ಕಾದಂಬರಿಯನ್ನಾಧರಿಸಿದ್ದು, ಇದೊಂದು ನೈಜ ಘಟನೆಯಾಧಾರಿತ ಚಿತ್ರ. ಬೆಳಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ದೇವರಾಯ ಇಂಗಳೆ ಎಂಬಾತ ದಲಿತರಿಗಾಗಿ ನಡೆಸಿದ ಹೋರಾಟವನ್ನು ಈ ಕಥೆ ಹೇಳುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com