ಶಕ್ತಿಮಾತೆ ಕತೆ

ಬಿ.ಎ ಪುರುಷೋತ್ತಮ್ ಈಗ ಮತ್ತೊಂದು ಭಕ್ತಿಪ್ರಧಾನ ಚಿತ್ರವನ್ನು ಸದ್ದಿಲ್ಲದಂತೆ ಮಾಡಿ...
ಶಕ್ತಿಮಾತೆ ಕತೆ

ಬಿ.ಎ ಪುರುಷೋತ್ತಮ್ ಈಗ ಮತ್ತೊಂದು ಭಕ್ತಿಪ್ರಧಾನ ಚಿತ್ರವನ್ನು ಸದ್ದಿಲ್ಲದಂತೆ ಮಾಡಿ ಮುಗಿಸಿದ್ದಾರೆ. ಪುರುಷೋತ್ತಮ್ ನಿರ್ದೇಶನದ 12ನೇ ಚಿತ್ರವಾಗಿ ಮೂಡಿಬಂದಿರುವ 'ಶ್ರೀಶಕ್ತಿಮಾತೆ' ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿದೇಶನ ಜವಾಬ್ದಾರಿ ಹೊತ್ತಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು, ಸದ್ಯದಲ್ಲೇ ಹಾಡುಗಳ ಧ್ವನಿ ಸುರುಳಿ ಬಿಡುಗಡೆ ಮಾಡವುದಾಗಿ ಯೋಜನೆ ಹಾಕಿಕೊಂಡಿದ್ದಾರೆ.

ಕೃತ ಯುಗದಲ್ಲಿ ಶ್ರೀದೇವಿಯ ಮಹಿಷಾಸುರನನ್ನು ಸಂಹರಿಸುವಾಗ ತೊಗಟೆ ವೀರರು ತೊಗಟೆಯಿಂದ ಮಾಡಿದ ವಸ್ತ್ರವನ್ನು ದೇವಿಗೆ ಕೊಡುತ್ತಾರೆ. ಆಗ ಸಂತೃಪ್ತವಾದ ದೇವಿಯು, 'ಕಲಿಯುಗದಲ್ಲಿ ಚಾಮೂಂಡೇಶ್ವರಿಯಾಗಿ ಭಕ್ತರಿಗೆ ನಾನು ದರ್ಶನ ನೀಡುತ್ತೇನೆ' ಎಂದು ಆಶೀರ್ವದಿಸುತ್ತಾಳೆ.

ಅದೇ ರೀತಿ ಭಕ್ತರ ಇಷ್ಟಾರ್ಥ ಪೂರೈಸಲು ಚಾಮುಂಡೇಶ್ವರಿಯಾಗಿ ಅವತರಿಸುವ ದೇವಿಯ ಕಥೆಯನ್ನು ಈ ಚಿತ್ರ ಹೊಂದಿದೆ. ಈ ಚಿತ್ರಕ್ಕೆ ರಾಜ್ ಭಾಸ್ಕರ್ ಸಂಗೀತ, ಎಂ.ಎಂ ಮುತ್ತರಾಜ್ ಛಾಯಾಗ್ರಹಣ, ವಿಷ್ಣು ನಾಚನೇಕರ್, ಕುಮಾರ್ ಸಿ.ಹೆಚ್.ಸಂಕಲನ, ಪುರುಷೋತ್ತಮ್ ಸಾಹಿತ್ಯವಿದೆ. ಚಿತ್ರದ ತಾರಾಬಳಗದಲ್ಲಿ ಆದರ್ಶ, ರೂಪಿಕೆ, ರೇಖಾ, ಮೀನಾ, ಜೆಮ್ ಶಿವು ಪುರುಷೋತ್ತಮ್ ಮುಂತಾದವರಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com