ದೇಶಪ್ರೇಮದ ಖುಷ್ಬೂ

ನರ್ಗಿಸ್‍ದತ್ ಅಭಿನಯದ ಮದರ್ ಇಂಡಿಯಾ ಚಿತ್ರಕ್ಕೆ ಇಂದಿಗೂ ಭಾರತದ ದೇಶಭಕ್ತಿಯ ಚಿತ್ರಗಳ ಪಟ್ಟಿ...
ನಟಿ ಖುಷ್ಬೂ
ನಟಿ ಖುಷ್ಬೂ
Updated on

ನರ್ಗಿಸ್‍ದತ್ ಅಭಿನಯದ ಮದರ್ ಇಂಡಿಯಾ ಚಿತ್ರಕ್ಕೆ ಇಂದಿಗೂ ಭಾರತದ ದೇಶಭಕ್ತಿಯ ಚಿತ್ರಗಳ ಪಟ್ಟಿಯಲ್ಲಿ ಅಗ್ರಸ್ಥಾನ. ಅದೇ ಕಾರಣಕ್ಕೆ ನರ್ಗಿಸ್‍ದತ್ ಹೆಸರಲ್ಲಿ ರಾಷ್ಟ್ರೀಯ ಸಿನಿಮಾ ಪ್ರಶಸ್ತಿಯೊಂದನ್ನೂ ನೀಡಲಾಗುತ್ತಿದೆ.

ಆ ಚಿತ್ರದಲ್ಲಿ ಲತಾ ಮಂಗೇಶ್ಕರ್ ಹಾಡಿರುವ `ಏ ಮೇರೆ ವತನ್ ಕೇ ಲೋಗೋ...'
ಕೇಳದವರು ಯರಿದ್ದಾರು? ಅಂದಿನ ಪ್ರಧಾನಿ ನೆಹರು ಈ ಹಾಡನ್ನು ಕೇಳಿ ಭಾವುಕರಾಗಿ ಕಣ್ಣೀರಿಟ್ಟಿದ್ದರೆಂಬುದು ಇತಿಹಾಸದಲ್ಲಿ ದಾಖಲಾಗಿ ಹೋಗಿರುವ ಸಂಗತಿ. ಆದರೆ ಈ ಹಾಡಿಗೆ ಕಂಬನಿ ಮಿಡಿದವರ ಪಟ್ಟಿ ಆ ನಂತರದಲ್ಲಿ ಉದ್ದವಾಗುತ್ತಲೇ ಹೋಗಿದೆ.

ಈ ಪಟ್ಟಿಗೆ ಸದ್ಯದ ಹೊಸ ಸೇರ್ಪಡೆ ನಟಿ ಖುಷ್ಬೂ.ಗಣರಾಜ್ಯೋತ್ಸವದಂದು ಈ ಹಾಡನ್ನು ಮತ್ತೊಮ್ಮೆ ಕೇಳಿದ ಖುಷ್ಬೂ ಮತ್ತೊಮ್ಮೆ ಎಂಬಂತೆ ಭಾವತೀವ್ರತೆಗೊಳಗಾಗಿ
ಬಿಕ್ಕಳಿಸಿದರಂತೆ. ಇದನ್ನು ಸ್ವತಃ ಆಕೆಯೇ ಟ್ವಿಟರ್‍ನಲ್ಲಿ ಹಂಚಿಕೊಂಡಿದ್ದಾರೆ. ನಟನೆಯಿಂದಾಚೆಗೆ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಬೆಳೆದು ಜನಪ್ರಿಯರಾಗಿರುವ ಖುಷ್ಬೂ ತನ್ನ ಅಭಿಮಾನಿಗಳಿಗೆ ಗಣರಾಜ್ಯೋತ್ಸವದಂದು ಶುಭ ಹಾರೈಸುತ್ತಾ, ಜಾತಿಧರ್ಮ ಭೇದಗಳನ್ನು ತೊರೆದು ದೇಶಭಕ್ತಿ ಬೆಳೆಸಿಕೊಳ್ಳಬೇಕೆಂದು ಕರೆನೀಡಿದ್ದಾರೆ.

ಹಿಂದೊಮ್ಮೆ ತನ್ನ ವಿವಾದಾತ್ಮಕ ಹೇಳಿಕೆಯ ಮೂಲಕ ಜನತೆ ಮತ್ತು ಮಾಧ್ಯಮದ ವಿರೋಧಕ್ಕೆ ಒಳಗಾಗಿದ್ದ ಖುಷ್ಬೂ ಈ ಬಾರಿ ತನ್ನ ಟ್ವೀಟ್ ಮೂಲಕ ಪ್ರಬುದ್ಧತೆ ಮೆರೆದಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com