
ಸಂಪೂರ್ಣ ಹೊಸಬರ ಚಿತ್ರ ಪ್ರಾಣ ಕೊಡುವೆ ಗೆಳತಿ ಹಾಡುಗಳು ಯುಟ್ಯೂಬ್‌ನಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಹಲವು ನಿರ್ದೇಶಕರ ಬಳಿ ಸಹಾಯಕರಾಗಿ ದುಡಿದ ಅನುಭವವಿರುವ ಯತೀಶ.ಬಿ.ಎಸ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಮತ್ತು ನಿರ್ದೇಶನದ ಪಾರುಪಥ್ಯ ವಹಿಸಿಕೊಂಡಿದ್ದು ನವಿರಾದ ಪ್ರೇಮ ಕತೆಯಲ್ಲಿ ಯಾರು ಪ್ರಾಣ ಕೊಡುತ್ತಾರೆ ಎಂಬ ಕುತೂಹಲವನ್ನು ಕೊನೆತನಕ ಗೊತ್ತಾಗದಂತೆ ಚಿತ್ರಕತೆ ಮಾಡಿಕೊಂಡಿದ್ದಾರಂತೆ.
ಮಂಗಳೂರಿನವರಾದ ಕಿರಣ್ ಹಳ್ಳಿಯಿಂದ ಪಟ್ಟಣಕ್ಕೆ ಅನಿವಾರ್ಯ ಕಾರಣದಿಂದ ಬಂದು ಅಲ್ಲಿ ಸಂಕಷ್ಟಗಳನ್ನು ಎದುರಿಸುವ ಪಾತ್ರದಲ್ಲಿ ನಟಿಸಿದ್ದಾರೆ. ಹಳ್ಳಿಯ ಮುಗ್ಧ ಹುಡುಗಿಯಾಗಿ ರಕ್ಷಾ ಕಾಣಿಸಿಕೊಂಡಿದ್ದಾರೆ. ಉಪನಾಯಾಕಿಯಾಗಿ ರಶ್ಮಿ ನಟನೆ ಇದೆ. ತಾಯಿಯಾಗಿ ಪದ್ಮವಾಸಂತಿ, ನಗಿಸಲು ಚಿಕ್ಕಣ್ಣ ಇದ್ದಾರೆ.
ಆದು ಹಾಡುಗಳ ಪೈಕಿ ಮೆಲೋಡಿ, ಐಟಂ, ಕನ್ನಡ ಕುರಿತ ಗೀತೆ ಇವೆ. ಟೈಟಲ್ ಸಾಂಗ್‌ಗೆ ಎ.ಟಿ.ರವೀಶ್ ಸಂಗೀತ ಸಂಯೋಜಿಸಿದ್ದಾರೆ. ಮಂಗಳೂರು, ಮಡಿಕೇರಿ, ಸೂರತ್ಕಲ್, ಚಿಕ್ಕಮಗಳರು, ಕಾರ್ಕಳ ಕಡೆಗಳಲ್ಲಿ ಚಿತ್ರೀರಕಣ ನಡೆಸಲಾಗಿದೆ. ಶ್ರೀ ವಸಂತ್ ಮೂವಿ ಮೇಕರ್ಸ್ ಸಂಸ್ಥೆಯು ನಿರ್ಮಾಣ ಮಾಡಿರುವ ಚಿತ್ರದಲ್ಲಿ ಕ್ಲಾಸ್, ಮಾಸ್‌ಗೆ ತಕ್ಕಂತೆ ಮೂಡಿ ಬಂದಿರುವುದು ವಿಶೇಷ. ವಿತರಕ ರಾಜಣ್ಣ ಮುಖಾಂತರ ಸುಮಾರು ಇಫ್ಪತ್ತು ಕೇಂದ್ರಗಳಲ್ಲಿ ಚಿತ್ರವು ಜನರ ಎದುರು ಶುಕ್ರವಾರದಂದು ಬಿಡುಗಡೆಯಾಗಲಿದೆ.
Advertisement