ಬ್ಲಾಕ್ ನಲ್ಲಿ ಬಾಹುಬಲಿ ಟಿಕೆಟ್ ಬೆಲೆ 5000 ರೂಪಾಯಿ!

ಬಾಹುಬಲಿ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳು ಟಿಕೆಟ್ ನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ.
ಟಿಕೆಟ್ ಗಾಗಿ ಕಿಕ್ಕಿರಿದಿರುವ ಅಭಿಮಾನಿಗಳು
ಟಿಕೆಟ್ ಗಾಗಿ ಕಿಕ್ಕಿರಿದಿರುವ ಅಭಿಮಾನಿಗಳು

ಹೈದರಾಬಾದ್: ಬಾಹುಬಲಿ ಸಿನಿಮಾ ಬಿಡುಗಡೆಗೆ ಕಾಯುತ್ತಿರುವ ಅಭಿಮಾನಿಗಳು ಟಿಕೆಟ್ ನ್ನು ಮುಂಗಡವಾಗಿ ಕಾಯ್ದಿರಿಸುತ್ತಿದ್ದಾರೆ. ಆದರೂ ಅಭಿಮಾನಿಗಳಿಗೆ ಟಿಕೆಟ್ ಸಿಗದೇ ಇರುವುದು  ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ಮಾಡುವವರಿಗೆ ಉಪಯೋಗವಾಗುತ್ತಿದೆ.

ಬ್ಲ್ಯಾಕ್ ನಲ್ಲಿ ಬಾಹುಬಲಿ ಟಿಕೆಟ್ ಗಳು ಭರ್ಜರಿಯಾಗಿ ಮಾರಾಟವಾಗುತ್ತಿದ್ದು, ಮಲ್ಟಿಪ್ಲೆಕ್ಸ್ ನಲ್ಲಿ 150 ರೂಪಾಯಿ ಇರುವ ಟಿಕೆಟ್ ಬೆಲೆ ಕಾಳಸಂತೆಯಲ್ಲಿ 500 ರಿಂದ 4000 ರೂಪಾಯಿ ವರೆಗೆ ಮಾರಾಟವಾಗುತ್ತಿದೆ. 5000 ರೂಪಾಯಿ ಖರ್ಚು ಮಾಡಿ ಟಿಕೆಟ್ ಕೊಳ್ಳುವುದಕ್ಕೂ ಬಾಹುಬಲಿ ನಿರೀಕ್ಷೆಯಲ್ಲಿರುವ ಅಭಿಮಾನಿಗಳು ತಯಾರಾಗಿದ್ದಾರೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಕಾಳಸಂತೆಯಲ್ಲಿ(ಬ್ಲ್ಯಾಕ್ ನಲ್ಲಿ) ಬಾಹುಬಲಿ ಚಿತ್ರದ ಟಿಕೆಟ್ ನ್ನು ಮಾರಾಟ ಮಾಡುತ್ತಿದ್ದ ಇಬ್ಬರನ್ನು ಹೈದರಾಬಾದ್ ನಲ್ಲಿ ಬಂಧಿಸಲಾಗಿದೆ.

ಚಿತ್ರ ಬಿಡುಗಡೆಯಾಗುವ ಮುನ್ನವೇ ಪ್ರೇಕ್ಷಕರಿಂದ ಹಿಂದೆಂದೂ ಈ ರೀತಿಯ ಪ್ರತಿಕ್ರಿಯೆ ವ್ಯಕವಾಗಿರಲಿಲ್ಲ. 2013 ರಲ್ಲಿ ಪವನ್ ಕಲ್ಯಾಣ್ ಅಭಿನಯದ ಅತ್ತರಿಂಟಿಕಿ ದಾರೇದಿ ಹಾಗೂ ಬಾಲಕೃಷ್ಣ ಅಭಿನಯದ ಚಿತ್ರಗಳಿಗೆ ಹೆಚ್ಚಿನ ನಿರೀಕ್ಷೆ ಇತ್ತಾದರೂ ಆ ಚಿತ್ರ ಸಿನಿಮಾಗಳ ಟಿಕೆಟ್ ಮೌಲ್ಯ ಕಾಳಸಂತೆಯಲ್ಲಿ 1000 ರೂಪಾಯಿ ದಾಟಿರಲಿಲ್ಲ ಎಂದು ಬ್ಲ್ಯಾಕ್ ಟಿಕೆಟ್ ಮಾರಾಟ ಮಾಡುವವರೊಬ್ಬರು ತಿಳಿಸಿರುವುದು  ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ವರದಿಯಾಗಿದೆ.    

ಇನ್ನು ಬಾಹುಬಲಿ ಚಿತ್ರದ ಕ್ರೇಜ್ ಯಾವ ಮಟ್ಟದಲ್ಲಿದೆ ಅಂದರೆ ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲೂ ಬ್ಲ್ಯಾಕ್ ಟಿಕೆಟ್ ಗಳು ಮಾರಾಟವಾಗತೊಡಗಿದೆ. ಕಾಳಸಂತೆಯಲ್ಲಿ ಟಿಕೆಟ್ ಮಾರಾಟ ಮಾಡುವವರು ಹಾಗೂ ಚಿತ್ರಮಂದಿರಗಳ ಮಾಲಿಕರ ನಡುವೆ ಒಪ್ಪಂದ ನಡೆದಿದ್ದು ಬ್ಲ್ಯಾಕ್ ನಲ್ಲಿ ಟಿಕೆಟ್ ಮಾರಾಟ ಮಾಡುವವರಿಗೆ ಹೆಚ್ಚು ಟಿಕೆಟ್ ಮಾರಾಟ ಮಾಡಲಾಗುತ್ತಿದೆ. ಇಷ್ಟು ದಿನ ಚಿತ್ರದ ಪೋಸ್ಟರ್, ನಿರ್ಮಾಣ ವೆಚ್ಚದಲ್ಲಿ ದಾಖಲೆ ನಿರ್ಮಿಸಿದ್ದ ಬಹುನಿರೀಕ್ಷಿತ ಚಿತ್ರ ಬಾಹುಬಲಿ ಕಾಳಸಂತೆಯಲ್ಲೂ ದಾಖಲೆ ಬರೆದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com