'ಮಾಸ್ಟರ್ ಪೀಸ್'ನಲ್ಲಿ ಖಳನಾಯಕನ ಛಾಯೆಯಲ್ಲಿ ಯಶ್

ಬಲ್ಲ ಮೂಲಗಳ ಪ್ರಕಾರ ಯಶ್ ಅವರ ಮುಂದಿನ ಸಿನೆಮಾದಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸುವ ಮೂಲಕ, ನಾಯಕ ನಟ ಎಂಬ ಪಟ್ಟದ ಜೊತೆ ಜೂಜಾಡಿದ್ದಾರೆ
'ಮಾಸ್ಟರ್ ಪೀಸ್'ನಲ್ಲಿ ನಟ ಯಶ್
'ಮಾಸ್ಟರ್ ಪೀಸ್'ನಲ್ಲಿ ನಟ ಯಶ್
Updated on

ಬೆಂಗಳೂರು: ಬಲ್ಲ ಮೂಲಗಳ ಪ್ರಕಾರ ಯಶ್ ಅವರ ಮುಂದಿನ ಸಿನೆಮಾದಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸುವ ಮೂಲಕ, ನಾಯಕ ನಟ ಎಂಬ ಪಟ್ಟದ ಜೊತೆ ಜೂಜಾಡಿದ್ದಾರೆ ಎನ್ನಲಾಗುತ್ತಿದೆ. ಮಂಜು ಮಾಂಡವ್ಯ ಅವರ ನಿರ್ದೇಶನದ 'ಮಾಸ್ಟರ್ ಪೀಸ್' ಸಿನೆಮಾದಲ್ಲಿ ಖಳನಾಯಕದ ಛಾಯೆ ಇರುವ ಪಾತ್ರದಲ್ಲಿ ಯಶ್ ಕಾಣಿಸಿಕೊಳ್ಳಲ್ಲಿದ್ದಾರಂತೆ. 'ಮಾಸ್ಟರ್ ಪೀಸ್'ನ ಕೆಲವು ಪೋಸ್ಟರ್ ಗಳಲ್ಲಿ ಯಶ್, ಭಗತ್ ಸಿಂಗ್ ವೇಷ ತೊಟ್ಟು ಕಾಣಿಸಿಕೊಂಡರೆ ಇನ್ನೂ ಕೆಲವು ಭಿತ್ತಿಚಿತ್ರಗಳಲ್ಲಿ ಕೋಪತಪ್ತ ಯುವಕನ ಛಾಯೆಯಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ನಾಯಕನಟನಾಗಿ ಬಹು ಪ್ರಖ್ಯಾತತೆ ಗಳಿಸುವ ನಟರು ಋಣಾತ್ಮಕ ಪಾತ್ರಗಳಲ್ಲಿ ನಟಿಸುವುದು ವಿರಳ.

ಚಿತ್ರತಂಡ ಯಾವುದೇ ಸುಳಿವು ನೀಡಲು ನಿರಾಕರಿಸಿರುವುದರಿಂದ ಯಶ್ ಪಾತ್ರದ ಬಗ್ಗೆ ಕುತೂಹಲ ಪ್ರೇಕ್ಷಕರಿಗೆ ದಿನದಿಂದ ದಿನಕ್ಕೆ ಏರುತ್ತಿದೆ.

ಈ ಹಿಂದೆ ಬಾಲಿವುಡ್ ನಟ ಶಾರುಕ್ ಖಾನ್ ಕೂಡ ನಟನೆಯ ಉತ್ತುಂಗದಲ್ಲಿದ್ದಾಗ ಬಾಜಿಗರ್ ಮತ್ತು ಡರ್ ಸಿನೆಮಾಗಲ್ಲಿ ಋಣಾತ್ಮಕ ಪಾತ್ರಗಳಲ್ಲಿ ನಟಿಸಿ ಜನಮನ ಗೆದ್ದಿದ್ದರು. ಕನ್ನಡ ಚಿತ್ರೋದ್ಯಮದಲ್ಲೂ ಕೂಡ ಉಪೇಂದ್ರ ಮತ್ತು ಸುದೀಪ್ ಈ ಪ್ರಯೋಗ ಮಾಡಿ ಗೆದ್ದಿರುವವರೇ. ಸ್ವಲ್ಪ ಹಿಂದಕ್ಕೆ ಹೋದರೆ ದಾರಿತಪ್ಪಿದ ಮಗ ಸಿನೆಮಾದಲ್ಲಿ ಡಾ. ರಾಜಕುಮಾರ್ ಕೂಡ ಅಲ್ಲದೆ ವಿವಿಧ ಸಮಯಗಳಲ್ಲಿ ಅಂಬರೀಶ್ ಮತ್ತು ವಿಷ್ಣುವರ್ಧನ್ ಕೂಡ ಖಳನಾಯಕರ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ವಿಜಯ್ ಕಿರಗಂಡೂರ್ ನಿರ್ಮಿಸುತ್ತಿರುವ ಈ ಸಿನೆಮಾದಲ್ಲಿ ಶಾನ್ವಿ ಶ್ರೀವಾಸ್ತವ, ಸುಹಾಸಿನಿ ಮತ್ತು ಚಿಕ್ಕಣ್ಣ ಕೂಡ ಸಹ ಪಾತ್ರಧಾರಿಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com