'ಲವ್ ಯು ಆಲಿಯಾ' ಆಯ್ತು ಈಗ ಅಜಯ್ ರಾವ್ ಅವರ 'ಮಾವ, ಐ ಲವ್ ಯು'

ಇಂದ್ರಜಿತ್ ಲಂಕೇಶ್ ಅವರು 'ಲವ್ ಯು ಆಲಿಯ' ಸಿನೆಮಾದ ಘೋಷಣೆ ಮಾಡಿದಾಗ ಅದು ಅಳಿಯ ಅಲ್ಲ ಆಲಿಯಾ ಎಂದು ಸ್ಪಷ್ಟೀಕರಿಸಬೇಕಾಗಿ ಬಂತು.
ನಟ ಅಜಯ್ ರಾವ್
ನಟ ಅಜಯ್ ರಾವ್
Updated on

ಬೆಂಗಳೂರು: ಇಂದ್ರಜಿತ್ ಲಂಕೇಶ್ ಅವರು 'ಲವ್ ಯು ಆಲಿಯ' ಸಿನೆಮಾದ ಘೋಷಣೆ ಮಾಡಿದಾಗ ಅದು ಅಳಿಯ ಅಲ್ಲ ಆಲಿಯಾ ಎಂದು ಸ್ಪಷ್ಟೀಕರಿಸಬೇಕಾಗಿ ಬಂತು. ಆದರೆ ನಟ ಅಜಯ್ ರಾವ್ ಅವರ ಈ 'ಮಾವ, ಐ ಲವ್ ಯು' ಸಿನೆಮಾಗೆ ಯಾವ ಸ್ಪಷ್ಟೀಕರಣೆಯೂ ಬೇಕಿಲ್ಲ. ಅನಿಲ್ ಕುಮಾರ್ ನಿರ್ದೇಶನದ ಹಾಗೂ ಉದಯ್ ಮೆಹ್ತಾ ನಿರ್ಮಿಸುತ್ತಿರುವ ಈ ಸಿನೆಮಾದ ಮುಹೂರ್ತ ಆಗಸ್ಟ್ ೧೯ ರಂದು ನಡೆಯಲಿದ್ದು ಅಂದೇ ಚಿತ್ರೀಕರಣ ಪ್ರಾರಂಭವಾಗಲಿದೆ. ನಟಿ ಅಮೂಲ್ಯ ಅಜಯ್ ರಾವ್ ಒಟ್ಟಿಗೆ ನಟಿಸಲಿದ್ದಾರೆ.

ಪಾತ್ರವರ್ಗದ ಬಗ್ಗೆ ಮಾತನಾಡಿದ ಉದಯ್ ಮೆಹ್ತಾ "ನಾಯಕ ನಟಿಯ ಪಾತ್ರಕ್ಕೆ ಮುಗ್ಧ ಮುಖವಿರುವ ಚುರುಕಾದ ಹುಡುಗಿಯ ಅವಶ್ಯಕತೆ ಇದ್ದದ್ದರಿಂದ ನಾವು ಆಮೂಲ್ಯ ಅವರನ್ನು ಅಂತಿಮಗೊಳಿಸಿದೆವು. ಅವರು ಸಿನೆಮಾಗೆ ಬಂದಿರುವುದರಿಂದ ಪ್ರೇಕ್ಷಕರು ಹೊಸ ಜೋಡಿಯೊಂದನ್ನು ನೋಡಬಹುದು" ಎನ್ನುತ್ತಾರೆ. ರುಕ್ಮಿಣಿ ಅಲಿಯಾಸ್ ರುಕ್ಕು ಎಂಬ ಪಾತ್ರ ನಿರ್ವಹಿಸುತ್ತಿರ್ವ ಅಮೂಲ್ಯ ತಮ್ಮ ಮತ್ತೊಂದು ಸಿನೆಮಾ 'ಮಮತೆಯ ಮದುವೆಯ ಕರೆಯೋಲೆ' ಸಿನೆಮಾದ ಚಿತ್ರಿಕರಣದ ಜೊತೆ ದಿನಾಂಕವನ್ನು ಹೊಂದಿಸಿಕೊಂಡಿದ್ದಾರಂತೆ.

ಚಲನಚಿತ್ರದ ಶೀರ್ಷಿಕೆ ಬಗ್ಗೆ ಮಾತನಾಡಿದ ಉದಯ್ ಮೆಹ್ತಾ "ನಂಟರು ಮತ್ತು ಸಂಬಂಧಿಕರ ಕಥೆ ಹೇಳುವ ಸಿನೆಮಾಗಳು ಕನ್ನಡದಲ್ಲಿ ವಿರಳವಾಗಿವೆ. ಈ ಶೀರ್ಷಿಕೆ ಪ್ರಾದೇಶಿಕ ಸಂಬಂಧವನ್ನು ಹೇಳುತ್ತದೆ. ಸಿನೆಮಾ ಗೆಲ್ಲುವ ನಂಬಿಕೆಯಿದೆ" ಎನ್ನುತ್ತಾರೆ.

ಅಂತಿಮ ಪಾತ್ರವರ್ಗದ ಆಯ್ಕೆಯಲ್ಲಿ ಚಿತ್ರತಂಡ ನಿರತವಾಗಿದ್ದು ಶೋಭರಾಜ್ ಮತ್ತು ಲೇಖ ರಾಜ್ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಲಿದ್ದಾರೆ ಎಂದು ತಿಳಿಸಿದೆ.

 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com