
ಬೆಂಗಳೂರು: 'ಆ ದಿನಗಳು' ಖ್ಯಾತಿಯ ಕೆ ಎಂ ಚೈತನ್ಯ ನಿರ್ದೇಶನದ, ದ್ವಾರಕೀಶ್ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ 'ಆಟಗಾರ' ಸಿನೆಮಾದ ಈ ಹಾಡಿನಲ್ಲಿ ಒಗಟಿನ ಸಾಹಿತ್ಯ ರಚಿಸುವ ಮೂಲಕ ಕನ್ನಡದ ಹಿರಿಯ ನಟರಾದ ಡಾ. ರಾಜಕುಮಾರ್ ಮತ್ತು ಡಾ. ವಿಷ್ಣುವರ್ಧನ್ ಅವರಿಗೆ ಗೌರವ ಸಮರ್ಪಿಸಿದ್ದಾರೆ.
ಆದರೆ ಸಂಪೂರ್ಣ ಹಾಡನ್ನು ಸಾರ್ವಜನಿಕಗೊಳಿಸದೆ, ಈ ಹಾಡಿನಲ್ಲಿ ಗುರವಿಸಲಾಗಿರುವ ಕನ್ನಡ ಚಿತ್ರೋದ್ಯಮದ ಮೂರನೆ ವ್ಯಕ್ತಿ ಯಾರು ಎಂದು ನಿರ್ದೇಶಕ ಚೈತನ್ಯ ತಮ್ಮ ಫೇಸ್ಬುಕ್ ಪುಟದಲ್ಲಿ ಪ್ರಶ್ನೆ ಹಾಕಿದ್ದಾರೆ.
ಅನೂಪ್ ಸೀಳಿನ್ ಸಂಗೀತ ನಿರ್ದೇಶನದ ಈ ಸಿನೆಮಾದ ಈ ಹಾಡಿನ ಗೀತರಚನಕಾರ ರೋಹಿತ್ ಪದಕಿ. ಅಚ್ಯುತ್ ಕುಮಾರ್, ಧ್ರುವ್ ಸರ್ಜಾ ಇನ್ನು ಹಲವಾರು ನಟರು ಮುಖ್ಯ ಪಾತ್ರಧಾರಿಗಳಾಗಿದ್ದು, ಈ ಥ್ರಿಲ್ಲರ್ ಸಿನೆಮಾ ಆಗಸ್ಟ್ ನಲ್ಲಿ ಬಿಡುಗಡೆ ಕಾಣಲಿದೆ ಎನ್ನಲಾಗಿದೆ.
ಈ ಹಾಡು ನೋಡಿ, ಮೂರನೆ ವ್ಯಕ್ತಿಯನ್ನು ಗೆಸ್ ಮಾಡಿ!
Advertisement