ಬಾಹುಬಲಿಯಲ್ಲಿ 'ಪಗಡೈ' ಪದ ಬಳಕೆಗೆ ಕ್ಷಮೆಯಾಚಿಸಿದ ಸಂಭಾಷಣಾಕಾರ

ಬಾಹುಬಲಿ ಚಿತ್ರದಲ್ಲಿ ಬಳಸಿರುವ 'ಪಗಡೈ' ಪದಕ್ಕೆ ಸಂಬಂಧಿಸಿದಂತೆ ಪಗಡೈ ಜನಾಂಗದ ಕೆಲವರು ಮಥುರೈ ಥಿಯೇಟರ್ ನಲ್ಲಿ ದಾಂದಲೆ...
ಬಾಹುಬಲಿ ಚಿತ್ರದ ಸ್ಟಿಲ್
ಬಾಹುಬಲಿ ಚಿತ್ರದ ಸ್ಟಿಲ್

ಚೆನ್ನೈ: ಬಾಹುಬಲಿ ಚಿತ್ರದಲ್ಲಿ ಬಳಸಿರುವ 'ಪಗಡೈ' ಪದಕ್ಕೆ ಸಂಬಂಧಿಸಿದಂತೆ ಪಗಡೈ ಜನಾಂಗದ ಕೆಲವರು ಮಥುರೈ ಥಿಯೇಟರ್ ನಲ್ಲಿ ದಾಂದಲೆ ನಡೆಸಿದ್ದರಿಂದ ಚಿತ್ರದ ಸಂಭಾಷಣೆಕಾರ ಮದನ್ ಕರ್ಕಿ ಅವರಲ್ಲಿ ಕ್ಷಮಾಪಣೆ ಕೇಳಿದ್ದಾರೆ.

ಬಾಹುಬಲಿ ಚಿತ್ರದಲ್ಲಿ ಕಾಲಕೇಯ ಗೋತ್ರದ ಜನರಿಗಾಗಿ ಪರಿಷ್ಕೃತವಾಗಿ ಬೇರೆ ಭಾಷೆಯೊಂದನ್ನು ಸೃಷ್ಟಿಸಲಾಗಿತ್ತು. ಅದೇ ಕಿಲಿಕಿಲಿ ಅಂತ. ತೆಲುಗಿನಲ್ಲಿ ಕಾಲಕೇಯದಂತೆ ತಮಿಳಿನಲ್ಲಿ ಪಗಡೈ ಎಂಬ ಪದ ಬಳಸಲಾಗಿದ್ದು, ಅದರಲ್ಲಿ ಪಗಡೈಕ್ಕು ಪಿರಿಯಾಂತವನ್ ಎಂಬ ಸಂಭಾಷಣೆಗೆ ಇದೀಗ ವಿರೋಧ ವ್ಯಕ್ತವಾಗಿದೆ.

ಪಗಡೈ ಪರಿಯಾಂತವನ್ ಎಂಬುದಕ್ಕೆ(ಪೈಶಾಚಿಕ ಕೃತ್ಯಕ್ಕೆ ಕುಲಗೋತ್ರವಿಲ್ಲ) ಎಂಬ ಅರ್ಥ ಬರುತ್ತದೆ ಇದರಿಂದಾಗಿ ಕ್ರೋದಗೊಂಡ ಪಗಡೈ ಜನಾಂಗದವರು ದಾಳಿ ನಡೆಸಿದ್ದರು. ಇದು ನನ್ನ ಅಜ್ಞಾನದಿಂದ ಆಗಿರುವ ಅಚಾತುರ್ಯ ಪಗಡೈ ಎಂಬ ಜನಾಂಗ ಇರುವುದಾಗಿ ನನಗೆ ತಿಳಿದಿರಲಿಲ್ಲ ಹೀಗಾಗಿ ನನ್ನಿಂದ ತಪ್ಪಾಗಿದ್ದು, ಕ್ಷಮೆಯಾಚಿಸಿರುವುದಾಗಿ ಮದನ್ ಕರ್ಕಿ ಹೇಳಿದ್ದಾರೆ.

ಯಾವುದೇ ಒಂದು ಸಮುದಾಯ ಹಾಗೂ ಜನಾಂಗಕ್ಕೆ ಅಪಮಾನ ಮಾಡುವ ಉದ್ದೇಶ ನಮಗಿಲ್ಲ. ಆದರೆ, ನನ್ನ ಅಜ್ಞಾನದಿಂದ ಇದು ಸಂಭವಿಸಿದೆ. ಮುಂದಿನ ದಿನಗಳ ಶೋನಲ್ಲಿ ಈ ಪದವನ್ನು ಕಿತ್ತು ಹಾಕುವ ಜವಬ್ದಾರಿಯನ್ನು ಮದನ್ ಕಿರ್ಕಿ ಹೊತ್ತುಕೊಂಡಿದ್ದಾರೆ. ಆದರೆ ಇಲ್ಲಿಯವರೆಗೂ ವಿತರಕರು ಹಾಗೂ ನಿರ್ಮಾಪಕರು ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.

ಎಸ್ ಎಸ್ ರಾಜಮೌಳಿಯ ಬಾಹುಬಲಿ ಚಿತ್ರ ದೇಶದಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com