
ಬೆಂಗಳೂರು: ಮೋಹನ್ ಗೌಡ ಅವರ ಮುಂದಿನ ಸಿನೆಮಾ 'ಬೆತ್ತನಗೆರೆ'ಯ ಟ್ರೇಲರ್ ಅನ್ನು ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅನಾವರಣ ಮಾಡಲಿದ್ದಾರೆ. ಭೂಗತ ಸಿನೆಮಾಗಳೆಂದರೆ ಆರ್ ಜಿ ವಿ ಅವರಿಗೆ ಮೊದಲಿನಿಂದಲೂ ಆಸಕ್ತಿ. ಬೆತ್ತನಗೆರೆ ಸೀನ ಮತ್ತು ಶಂಕರ ಇವರ ನಿಜಜೀವನ ಆಧಾರಿತ ಈ ಸಿನೆಮಾದ ಕಥೆ ಕೇಳಿ ಆರ್ ಜಿ ವಿ ಥ್ರಿಲ್ ಆದರಂತೆ. ಆದುದರಿಂದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬರಲು ಒಪ್ಪಿಕೊಂಡರು ಎಂದು ತಿಳಿದುಬಂದಿದೆ.
ಆರ್ ಜಿ ವಿ ಸದ್ಯಕ್ಕೆ ಶಿವರಾಜ್ ಕುಮಾರ್ ಅಭಿನದ 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ಚಿತ್ರೀಕರಣದಲ್ಲಿ ನಿರತರಾಗಿದ್ದು ಕರ್ನಾಟಕದಲ್ಲೇ ಇದ್ದಾರೆ.
ಸುಮಂತ್ ಶೈಲೇಂದ್ರ, ಅಕ್ಷಯ್, ವಿನೋದ್ ಕಾಂಬ್ಲಿ, ಅವಿನಾಶ್ ಇವರು ಬೆತ್ತನಗೆರೆ ಸಿನೆಮಾದ ಮುಖ್ಯಪಾತ್ರಗಳಲ್ಲಿ ನಟಿಸಿದ್ದಾರೆ.
Advertisement