
ನವದೆಹಲಿ: ಅಂಧ ಚೆಸ್ ಆಟಗರಾರ ಕುರಿತು ನಿರ್ಮಿಸಿರುವ 'ಅಲ್ಗಾರಿಥಮ್ಸ್' ಸಾಕ್ಷ್ಯಚಿತ್ರವನ್ನು ಭಾರತದ ಮೆಟ್ರೋ ನಗರಗಳಲ್ಲಿ ಆಗಸ್ಟ್ ೨೧ರಂದು ಬಿಡುಗಡೆ ಮಾಡಲಾಗುವುದು.
ಸಮಾಜಶಾಸ್ತ್ರಜ್ಞ ಮತ್ತು ಸಾಕ್ಷ್ಯಚಿತ್ರ ನಿರ್ದೇಶಕ ಇಯಾನ್ ಮೆಕ್ ಡೋನಾಲ್ಡ್ ನಿರ್ದೇಶಿಸಿರುವ ಈ ಸಿನೆಮಾ ಪಿವಿಆರ್ ನಿರ್ದೇಶಕ ವಿರಳ ವಿಭಾಗದಲ್ಲಿ ಬಿಡುಗಡೆಯಾಗಲಿದ್ದು ದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಕೊಚ್ಚಿಯಲ್ಲಿ ಪ್ರದರ್ಶನ ಕಾಣಲಿದೆ.
ಎಲೆ ಮರೆ ಕಾಯಿಯಾಗಿರುವ ಭಾರತದಲ್ಲಿನ ಅಂಧ ಚೆಸ್ ಲೋಕದ ಬಗ್ಗೆ ಈ ಸಿನೆಮ ಮಾಡಲಾಗಿದೆ. ಮೂರು ವರ್ಷಗಳಿಗಿಂತಲೂ ಹೆಚ್ಚು ಕಾಲ ಚಿತ್ರೀಕರಣ ಮಾಡಿರುವ ಈ ಸಾಕ್ಷ್ಯಚಿತ್ರ ಮೂರು ಯುವ ಅಂಧ ಚೆಸ್ ಆಟಗಾರರ ಸುತ್ತ ಹೆಣೆಯಲಾಗಿದೆ. ಅವರಲ್ಲಿ ಒಬ್ಬ ರಾಷ್ಟ್ರಮಟ್ಟದ ಹಾಗೂ ವಿಶ್ವ ಮಟ್ಟದ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸಿದ ಕಥೆಯನ್ನು ಕೂಡ ಹೇಳಲಿದೆಯಂತೆ.
ಈಗಾಗಲೇ ಹಲವಾರು ಪ್ರಶಸ್ತಿಗಳನ್ನು ಗೆದ್ದಿರುವ ಈ ಸಾಕ್ಷ್ಯಚಿತ್ರದಲ್ಲಿ ಅಂಧ ಚೆಸ್ ಆಟಗಾರರಾದ ಚಾರುದತ್ತ ಜಾಧವ್, ದರ್ಪಣ್ ಇನಾನಿ, ಸಾಯಿ ಕೃಷ್ಣ ಮತ್ತು ಅನಂತ್ ಕುಮಾರ್ ನಾಯಕ್ ಕಾಣಿಸಿಕೊಳ್ಳಲಿದ್ದಾರೆ.
Advertisement