
ಲಾಸೇಂಜಲೀಸ್: ಪಾಪ್ ಸಂಗೀತದ ದೊರೆ ದಿವಂಗತ ಮೈಕೆಲ್ ಜಾಕ್ಸನ್ ನ ಬಿಳಿ ಬಣ್ಣದ ಕೈಗವಚ ೨೦೦೦೦ ಡಾಲರ್ ಮೂಲ ಬೆಲೆಗೆ ಹರಾಜಾಗಲಿದೆ.
ಹರಾಜು ಸಂಸ್ಥೆ ನೆಟ್ ಡಿ ಸ್ಯಾಂಡರ್ಸ್ ಗುರುವಾರ ಈ ಹಾರಾಜನ್ನು ನಡೆಸಲಿದ್ದು 'ಬ್ಯಾಡ್' ಸಂಗೀತ ಆಲ್ಬಮ್ ಮೇಲಿನ ಚಿತ್ರದಲ್ಲಿ ಜಾಕ್ಸನ್ ಧರಿಸಿದ್ದ ಕಪ್ಪು ಚರ್ಮದ ಕೋಟಿನ ಪ್ರತಿರೂಪದ ಜ್ಯಾಕೆಟ್ ಕೂಡ ಹರಾಜಿಗೆ ಒಳಪಡಲಿದೆ.
ಈ ಹಿಂದೆ ೨೦೦೯ರಲ್ಲಿ ಹರಾಜಿಗೆ ಒಳಪಟ್ಟಿದ್ದ ಜ್ಯಾಕ್ಸನ್ 'ಮೂನ್ ವಾಕ್' ಕೈಗವಚ ೩೫೦೦೦೦ ಡಾಲರ್ ಗಳಿಗೆ ಮಾರಾಟವಾಗಿತ್ತು. ೨೦೧೦ ರ ಜೂನಿನಲ್ಲಿ ಮತ್ತೊಂದು ಕೈಗವಚವನ್ನು ೧೬೦೦೦೦ ಡಾಲರ್ ಗಳಿಗೆ ಹರಾಜಾಗಿತ್ತು. ಇವಕ್ಕೆ ಹೋಲಿಸಿದರೆ ಈ ಹರಾಜಿನ ಮೂಲ ಬೆಲೆ ಅತಿ ಕಡಿಮೆ ಎನ್ನಲಾಗಿದೆ.
ಜಾಕ್ಸನ್ ತನ್ನ ಬಲಗೈಕವಚವನ್ನು ತನ್ನ ಗೆಳೆಯ ಕಲಾವಿದ ಪೌಲ್ ಬೆಡಾರ್ಡ್ ಗೆ ಉಡುಗೊರೆ ನೀಡಿದ್ದ.
Advertisement