
ಬೆಂಗಳೂರು: ನಿರ್ದೇಶಕ ಪವನ್ ಒಡೆಯರ್ ತಮ್ಮ ಮುಂದಿನ ಸಿನೆಮಾ 'ಜೆಸ್ಸಿ'ಯ ಮೊದಲ ಹಂತದ ಚಿತ್ರೀಕರಣ ಮುಗಿಸಿದ್ದಾರೆ. ಈ ಚಿತ್ರದಲ್ಲಿ ನಟ ಧನಂಜಯ್ ಮತ್ತು ರಘು ಮುಖರ್ಜಿ ಜೊತೆ ಈಗ ಸದ್ಯಕ್ಕೆ ಅತಿ ಹೆಚ್ಚು ಬ್ಯುಸಿಯಾಗಿರುವ ನಟಿ ಪರುಲ್ ಯಾದವ್ ನಾಯಕಿ. 'ಪಕ್ಕದ ಮನೆ ಹುಡುಗಿ' ಪಾತ್ರದಲ್ಲಿ ನಟಿಸಿರುವ ಪರುಲ್ ಊಟಿಯಲ್ಲಿ ನಡೆದ ಚಿತ್ರೀಕರಣದ ಬಗ್ಗೆ ಸಂತಸಗೊಂಡಿದ್ದಾರೆ. "ಕೆಲಸ ತುಂಬಾ ಇತ್ತು ಆದರೆ ಹಿತವಾದ ವಾತಾವರಣದಲ್ಲಿ ಎಲ್ಲವೂ ಸುಸೂತ್ರವಾಗಿ ನೆರವೇರಿತು" ಎನ್ನುತ್ತಾರೆ ನಂದಿನಿ ಎಂಬ ಪಾತ್ರ ಪೋಷಿಸುತ್ತಿರುವ ನಟಿ . "ನನ್ನ ಪರಿಚಯ ಹಾಡನ್ನು ಚಿತ್ರೀಕರಿಸಿದ್ದೇವೆ ಅಲ್ಲದೆ ಧನಂಜಯ್ ಜೊತೆಗಿನ ಕೆಲವು ಸಂಭಾಷಣೆಗಳನ್ನು" ಎಂದು ನಟಿ ತಿಳಿಸಿದ್ದಾರೆ.
ಸದ್ಯಕ್ಕೆ ಮೂರು ಸಿನೆಮಾಗಳನ್ನು ಒಂದರ ಹಿಂದೆ ನಟಿಸುತ್ತಿದ್ದಾರಂತೆ. ಈಗ ಸೋಮವಾರ 'ಕಿಲ್ಲಿಂಗ್ ವಿರಪ್ಪನ್' ತಂಡ ಸೇರಲಿದ್ದು ಆಗಸ್ಟ್ ಮಧ್ಯಭಾಗದವರೆಗೆ ಶಿವರಾಜ್ ಕುಮಾರ್ ಒಟ್ಟಿಗೆ ಚಿತ್ರೀಕರಣ ನಡೆಸುತ್ತಾರಂತೆ.
"ಅಲ್ಲದೆ ವಿಜಯಾದಿತ್ಯ ಸಂಪೂರ್ಣಗೊಳಿಸಲು ನಾನು ದಿನಾಂಕ ಹೊಂದಿಸಿಕೊಳ್ಳಬೇಕು ನಂತರ 'ಜೆಸ್ಸಿ'ಗೆ ಹಿಂದಿರುಗಬೇಕು. ಈಗ ಸದ್ಯಕ್ಕೆ ಏಕಕಾಲಕ್ಕೆ ಎರಡು ಸಿನೆಮಾಗಳ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದೇನೆ ಮುಂದೆ ಏನು ಬರುತ್ತದೋ ಕಾದು ನೋಡಬೇಕು" ಎನ್ನುತ್ತಾರೆ ಪರುಲ್.
Advertisement