ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ಚಲನಚಿತ್ರ ವಾಣಿಜ್ಯ ಮಂಡಳಿ ತಪ್ಪೇನಿದೆ?

ಮಿತಿಮೀರಿ ಬೆಳೆದ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಲಾಗುತ್ತದೆ. ಇಡೀ ರಾಜ್ಯಕ್ಕೆ ಇದ್ದ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಉತ್ತರ ಕರ್ನಾಟಕ ಭಾಗಕ್ಕೆವಿಂಗಡಣೆ ಮಾಡಿದರೆ ತಪ್ಪೇನಿದೆ ಎಂದು ಚಲನಚಿತ್ರ ನಿರ್ದೇಶಕ ಸುರೇಶ ಹೆಬ್ಳೀಕರ್ ಪ್ರಶ್ನಿಸಿದ್ದಾರೆ...
ಚಲನಚಿತ್ರ ನಿರ್ದೇಶಕ ಸುರೇಶ ಹೆಬ್ಳೀಕರ್
ಚಲನಚಿತ್ರ ನಿರ್ದೇಶಕ ಸುರೇಶ ಹೆಬ್ಳೀಕರ್

ಕೊಪ್ಪಳ: ಮಿತಿಮೀರಿ ಬೆಳೆದ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಭಜಿಸಲಾಗುತ್ತದೆ. ಇಡೀ ರಾಜ್ಯಕ್ಕೆ ಇದ್ದ ಚಲನಚಿತ್ರ ವಾಣಿಜ್ಯ ಮಂಡಳಿಯನ್ನು ಉತ್ತರ ಕರ್ನಾಟಕ ಭಾಗಕ್ಕೆವಿಂಗಡಣೆ ಮಾಡಿದರೆ ತಪ್ಪೇನಿದೆ ಎಂದು ಚಲನಚಿತ್ರ ನಿರ್ದೇಶಕ ಸುರೇಶ ಹೆಬ್ಳೀಕರ್ ಪ್ರಶ್ನಿಸಿದ್ದಾರೆ.

ಸುದ್ದಿಗಾರರ ಜತೆಗೆ ಮಾತನಾಡಿ, ಅದೇನೂ ಚಲನಚಿತ್ರ ವಾಣಿಜ್ಯ ಮಂಡಳಿಗೆ ಪ್ರತ್ಯೇಕ ಅಥವಾ ಪರ್ಯಾವಾಗಿ ಸ್ಥಾಪನೆಯಾಗುತ್ತಿಲ್ಲ. ಈ ಭಾಗದ ಹಿತದೃಷ್ಟಿಯಿಂದ ಮಾಡಲಾಗುತ್ತದೆ. ಈ ಭಾಗದ ಭಾಷೆಯಲ್ಲಿ ಮಾತನಾಡಿದರೆ ಅಪಹಾಸ್ಯ ಮಾಡುತ್ತಾರೆ. ಇಲ್ಲಿನ ಕಲಾವಿದರಿಗೆ ರಾಜಕೀಯ ನಾಯಕರ, ಪೊಲೀಸರ ಪಾತ್ರ ನೀಡಲಾಗುತ್ತದೆ. ಈ ಭಾಗಕ್ಕೂ ಮಂಡಳಿ ಇದ್ದರೆ ಒಳ್ಳೆಯದು ಎಂದರು.

ಶೌಚಾಲಯ ಕ್ರಾಂತಿ ಕಿರುಚಿತ್ರ:
ಕೊಪ್ಪಳ ಜಿಲ್ಲೆಯ ಶೌಚಾಲಯ ಕ್ರಾಂತಿ ಕುರಿತ ಕಿರುಚಿತ್ರ ಶೀಘ್ರದಲ್ಲೇಯೇ ಬರಲಿದೆ ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ಸುರೇಶ ಹೆಬ್ಳೀಕರ್ ಹೇಳಿದ್ದಾರೆ. ಕೊಪ್ಪಳ ಶೌಚಾಲಯ ಕ್ರಾಂತಿ ದೇಶದಲ್ಲಿಯೇ ಹೆಸರು ಮಾಡಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ ಅವರ ಬಳಿ ಮಾತನಾಡಿದ್ದೇನೆ ಎಂದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com