ದಿಲ್‌ವಾಲೇ ಚಿತ್ರದಲ್ಲಿ ಒಂದಾಗಲಿದ್ದಾರೆ ಕಾಜೋಲ್, ಶಾರುಖ್ ಜೋಡಿ

ದಿಲ್‌ವಾಲೇ ದುಲ್ಹನಿಯಾ ಲೇಜಾಯೇಂಗೇ ಚಿತ್ರದ ರಾಜ್ ಮತ್ತು ಸಿಮ್ರಾನ್‌ನ್ನು ಮರೆಯಲು ಸಾಧ್ಯವೆ? ಶಾರುಖ್ ಖಾನ್ (ರಾಜ್) ಮತ್ತು ಕಾಜೋಲ್ (ಸಿಮ್ರಾನ್)...
ಶಾರುಖ್ ಖಾನ್  ಮತ್ತು ಕಾಜೋಲ್ (ಕೃಪೆ: ಟ್ವಿಟರ್ )
ಶಾರುಖ್ ಖಾನ್ ಮತ್ತು ಕಾಜೋಲ್ (ಕೃಪೆ: ಟ್ವಿಟರ್ )
Updated on

ಮುಂಬೈ: ದಿಲ್‌ವಾಲೇ ದುಲ್ಹನಿಯಾ ಲೇಜಾಯೇಂಗೇ ಚಿತ್ರದ ರಾಜ್ ಮತ್ತು ಸಿಮ್ರಾನ್‌ನ್ನು ಮರೆಯಲು ಸಾಧ್ಯವೆ? ಶಾರುಖ್ ಖಾನ್ (ರಾಜ್) ಮತ್ತು ಕಾಜೋಲ್ (ಸಿಮ್ರಾನ್) ನಿರ್ವಹಿಸಿದ ಆ ಪಾತ್ರಗಳು ಪ್ರೇಕ್ಷಕರ ಮನದಲ್ಲಿ ಇನ್ನೂ ಕಾಡುತ್ತಿದೆ. ಶಾರುಖ್ ಖಾನ್ ಮತ್ತು ಕಾಜೋಲ್ ಜೋಡಿಯನ್ನು ತೆರೆಯ ಮೇಲೆ ಕಾಣುವುದೇ ಸಂಭ್ರಮ. ಈಗ ರೋಹಿತ್ ಶೆಟ್ಟಿ ನಿರ್ದೇಶನದ 'ದಿಲ್‌ವಾಲೇ' ಸಿನಿಮಾದ ಮೂಲಕ ಈ ಜೋಡಿ ಮತ್ತೆ ತೆರೆಯ ಮೇಲೆ ಮೋಡಿ ಮಾಡಲು ತಯಾರಾಗಿದ್ದಾರೆ.

ದಿನಗಳ ಹಿಂದೆ ಶಾರುಖ್ ಖಾನ್ 'ದಿಲ್‌ವಾಲೇ' ಸಿನಿಮಾ ಚಿತ್ರೀಕರಣದ ಸೆಟ್‌ನಲ್ಲಿ ರೋಹಿತ್ ಶೆಟ್ಟಿ ಮತ್ತು ಕಾಜೋಲ್ ಜತೆಗಿನ ಫೋಟೋವನ್ನು ಟ್ವೀಟರ್‌ನಲ್ಲಿ ಶೇರ್ ಮಾಡಿದ್ದರು. ಇದಾದನಂತರ ನಿನ್ನೆ (ಶನಿವಾರ) ಕಾಜೋಲ್ ಜತೆಗೆ ಅಭಿನಯಿಸಿದ ಚಿತ್ರಗಳನ್ನು ಕೊಲಾಜ್ ಮಾಡಿ ಟ್ವಿಟರ್‌ನಲ್ಲಿ ಶೇರ್ ಮಾಡಿದ್ದು, ಈ ಚಿತ್ರಗಳೀಗ ಟ್ವಿಟರ್‌ನಲ್ಲಿ ಸಂಚಲನ ಸೃಷ್ಟಿಸಿವೆ.

ಬಾಜೀಗರ್ (1993), ಕರಣ್ ಅರ್ಜುನ್ (1995), ದಿಲ್‌ವಾಲೇ ದುಲ್ಹನಿಯಾ ಲೇಜಾಯೇಂಗೆ (1995), ಕುಚ್ ಕುಚ್ ಹೋತಾ ಹೈ   (1998), ಕಭೀ ಖುಷಿ ಕಭೀ ಗಮ್ (2001) ಮತ್ತು ಮೈ ನೇಮ್ ಈಸ್ ಖಾನ್ ( 2010) ಚಿತ್ರದ ಫೋಟೋಗಳನ್ನು ಶಾರುಖ್ ಕೊಲಾಜ್ ಮಾಡಿ ಹಾಕಿದ್ದಾರೆ.

ಇತ್ತ ಕಾಜೋಲ್ 4 ವರ್ಷಗಳ ನಂತರ ಶಾರುಖ್ ಖಾನ್ ಜತೆ ಒಂದಾಗುತ್ತಿರುವ ಖುಷಿಯನ್ನು ಟ್ವಿಟರ್‌ನಲ್ಲಿ ಫೋಟೋ ಶೇರ್ ಮಾಡುವ ಮೂಲಕ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com