
ಬುಲ್ ಬುಲ್ ಬೆಡಗಿ, ರನ್ನನ ರಾಣಿ ರಚಿತ್ ರಾಮ್ ಅವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 25ನೇ ಚಿತ್ರ 'ಚಕ್ರವ್ಯೂಹ' ಭೇದಿಸುವ ಸಾಧ್ಯತೆ ಇದೆ.
ಹೌದು, 'ಚಕ್ರವ್ಯೂಹ' ಭೇಧಿಸಲು ಸಮರ್ಥ ನಾಯಕಿಗಾಗಿ ಚಿತ್ರದ ನಿರ್ದೇಶಕ ಶರವಣನ್ ಸಾಕಷ್ಟು ಯತ್ನಿಸುತ್ತಿದ್ದಾರೆ. ಈ ಹಿಂದೆ ಪನೀತ್‌ಗೆ ಜೊಡಿಯಾಗಿ ಮರಾಠಿ ಮತ್ತು ಹಿಂದಿ ಧಾರವಾಹಿಗಳಲ್ಲಿ ಮಿಂಚಿದ್ದ ಕಿರುತೆರೆ ನಟಿ ಪಲ್ಲವಿ ಸುಭಾಷ್ ಅವರನ್ನು ಕರೆ ತಂದಿದ್ದರು. ಆದರೆ ಪಲ್ಲವಿ ಪಾತ್ರಕ್ಕೆ ನ್ಯಾಯ ಒದಗಿಸುತ್ತಿಲ್ಲ ಎಂದು ಈಗ ಆ ಸ್ಥಾನಕ್ಕೆ ಕನ್ನಡದ ಹುಡುಗಿ ರಚಿತಾ ರಾಮ್ ಅವರನ್ನು ಕರೆತರಲು ಮುಂದಾಗಿದ್ದಾರೆ.
ಈಗಾಗಲೇ 20 ದಿನಗಳ ಕಾಲ ಚಿತ್ರದ ಕೆಲವು ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಆದರೆ ಪಲ್ಲವಿ ಅವರು ಕೇವಲು ಮೂರು ದಿನ ಮಾತ್ರ ಚಿತ್ರೀಕರಣದಲ್ಲಿ ಭಾಗಿಯಾಗಿದ್ದು, ಆ ದೃಶ್ಯಗಳನ್ನು ಮತ್ತೊಮ್ಮೆ ಶೂಟ್ ಮಾಡಲಾಗುವುದು ಎಂದು ಶರವಣನ್ ಅವರು ತಿಳಿಸಿದ್ದಾರೆ.
ಸದ್ಯ ರಚಿತ್ ರಾಮ್ 'ರಥಾವರ' ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
1983ರಲ್ಲಿ ತೆರೆ ಕಂಡಿದ್ದ ಚಕ್ರವ್ಯೂಹ ಸಿನಿಮಾ ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ವಿಶೇಷ ಇಮೇಜ್ ನೀಡಿತ್ತು. ಅಲ್ಲದೇ, ಎನ್.ವೀರಾಸ್ವಾಮಿ ಅವರ ಬ್ಯಾನರ್ ನಲ್ಲಿ ತಯಾರಾಗಿದ್ದ ಈ ಸಿನಿಮಾ ಬಾಕ್ಸ್ ಆಫೀಸನ್ನೂ ಕೊಳ್ಳೆಹೊಡೆದಿತ್ತು. ಇದೇ ಶೀರ್ಷಿಕೆಯನ್ನು ಪುನೀತ್ ರಾಜ್ ಚಿತ್ರಕ್ಕೆ ಫೈನಲ್ ಮಾಡಿರುವುದು ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.
Advertisement