ಉತ್ತಮ ವಿಲನ್ ಆಡಿಯೋ ಬಿಡುಗಡೆ ಮಾಡಿದ ನಟ ಕಮಲ್ ಮತ್ತು ನಿರ್ದೇಶಕ ರಮೇಶ್
ಸಿನಿಮಾ ಸುದ್ದಿ
ಉತ್ತಮ ವಿಲನ್ ಹಾಡುಗಳು ಮೊಬೈಲ್ ಆಪ್ ನಲ್ಲಿ ಬಿಡುಗಡೆ
ಚೆನ್ನೈ ವಾಣಿಜ್ಯ ಕೇಂದ್ರಲ್ಲಿ ಭಾನುವಾರ ನಡೆದ ವಿನೂತನ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ, 'ಉತ್ತಮ ವಿಲನ್' ಸಿನೆಮಾದ ಹಾಡುಗಳನ್ನು
ಚೆನ್ನೈ: ಚೆನ್ನೈ ವಾಣಿಜ್ಯ ಕೇಂದ್ರಲ್ಲಿ ಭಾನುವಾರ ನಡೆದ ವಿನೂತನ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ, 'ಉತ್ತಮ ವಿಲನ್' ಸಿನೆಮಾದ ಹಾಡುಗಳನ್ನು ಸಾಂಪ್ರದಾಯಿಕ ಸಿಡಿಯಲ್ಲಿ ಬಿಡುಗಡೆ ಮಾಡುವ ಬದಲಾಗಿ ಮೊಬೈಲ್-ಆಪ್ ಮೂಲಕ ಕಮಲಹಾಸನ್ ಬಿಡುಗಡೆ ಮಾಡಿದ್ದಾರೆ.
ವೇದಿಕೆ ಮೇಲಿದ್ದ ಕಮಲ್ ಮುಂಬೈನಲಿದ್ದ ನಮ್ಮ ಮಗಳು ಶ್ರುತಿ ಅವರಿಗೆ ಕರೆ ಮಾಡಿ ಈ ಆಡಿಯೋ ಆಪ್ ಬಿಡುಗಡೆ ಮಾಡಿದ್ದಾರೆ.
ಕಮಲಾ ಹಾಸನ್, ಪಾರ್ಥಿಬಾನ್, ಮದನ್ ಕಾರ್ಕಿ ಮತ್ತು ವಿಳುಪಾತು ಸುಬ್ಬು ಅರುಣಾಚಲಂ ಒಳಗೊಂಡ ಸಂವಾದ ಕಾರ್ಯಕ್ರಮ ಸುಮಾರು ೨ ಘಂಟೆಗಳವರೆಗೂ ಮುಂದುವರೆದಾಗ ಜನರು ಖುರ್ಚಿ ತೊರೆಯಲು ಮುಂದಾಗಿದ್ದಾರೆ. ಇದನ್ನು ಗಮನಿಸಿದ ಆಯೋಜಕರು ಕಮಲಹಾಸನ್ ಅವರನ್ನು ಪರಿಚಯಿಸಿದ ದಿವಂಗತ ದಿಗ್ಗಜ ನಿರ್ದೇಶಕ ಕೆ ಬಾಲಚಂದರ್ ಅವರ ಎರಡು ಹಾಡುಗಳ ದೃಶ್ಯಗಳನ್ನು ಜನರಿಗೆ ತೋರಿಸಿದ್ದಾರೆ. ನಂತರ ಮೊಬೈಲ್ ಆಪ್ ಬಿಡುಗಡೆ ಮಾಡಲಾಗಿದೆ. ನಿರ್ದೇಶಕ ರಮೇಶ್ ಅರವಿಂದ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ