ಮಾರ್ಚ್ ೧೫ರಂದು 'ಹಿನ್ನಲೆ ಗಾಯಕ' ಕಾರ್ಯಗಾರ

ಹಿನ್ನಲೆ ಗಾಯನವನ್ನು ತಮ್ಮ ವೃತ್ತಿಜೀವನವನ್ನಾಗಿಸಿಕೊಳ್ಳುವವರಿಗೆ ಇದೊಂದು ಸುವರ್ಣಾವಕಾಶ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಹಿನ್ನಲೆ ಗಾಯನವನ್ನು ತಮ್ಮ ವೃತ್ತಿಜೀವನವನ್ನಾಗಿಸಿಕೊಳ್ಳುವವರಿಗೆ ಇದೊಂದು ಸುವರ್ಣಾವಕಾಶ. 'ಮುಗ್ ಟು ಮೈಕ್" ಮಾರ್ಚ್ ೧೫ ರಂದು ಬೆಂಗಳೂರಿನಲ್ಲಿ 'ಹಿನ್ನಲೆ ಗಾಯಕ' ಕಾರ್ಯಾಗಾರವನ್ನು ಏರ್ಪಡಿಸಿದೆ.

ಹಿನ್ನಲೆ ಗಾಯನದ ಉದ್ಯಮದಲ್ಲಿ ಇಂದಿನ ಬೆಳವಣಿಗೆಯನ್ನು ಕುರಿತು ಹಾಡುಗಾರಿಕೆಯ ಬಗ್ಗೆ ತೀವ್ರ ಆಸಕ್ತಿ ಉಳ್ಳವರಿಗಾಗಿ ಈ ಕಾರ್ಯಗಾರ ಅತಿ ಉಪಯುಕ್ತ ಎನ್ನುತ್ತಾರೆ 'ಮುಗ್ ಟು ಮೈಕ್' ನ ಸಂಸ್ಥಾಪಕ ಸುನಿಲ್ ಕೋಶಿ. ಇದು ಹೆಚ್ಚು ಹಾಡಲು ಬಾರದ ಗಾಯಕರಿಗೆ ಹಾಡುಗಾರಿಕೆಯ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಕೂಡ ಸಹಕಾರಿ ಎನ್ನುತಾರೆ ಕೋಶಿ. ಹಾಡುಗಾರಿಕೆಯಲ್ಲಿ ಯಾವುದೇ ಹಿನ್ನಲೆ ಇಲ್ಲದಿರುವವರಿಗೂ- ವಯಸ್ಸಿನ ಯಾವುದೇ ನಿರ್ಭಂಧ ಇಲ್ಲದೆ ಇದರಲ್ಲಿ ಭಾಗವಹಿಸಬಹುದು ಎನ್ನುತ್ತಾರೆ.

ಈ ಕಾರ್ಯಾಗಾರದಲ್ಲಿ ಪದ್ಮವಿಭೂಷಣ ಎಂ ಬಾಲಮುರಳಿಕೃಷ್ಣ ಅವರಲ್ಲಿ ಶಿಷ್ಯವೃತ್ತಿ ಮಾಡಿದ ಡಾ. ಕೆ ಕೃಷ್ಣಕುಮಾರ್ ಭಾಗವಹಿಸಿ, ಶಿಬಿರಾರ್ಥಿಗಳಿಗೆ ತಮ್ಮ ಮಾರ್ಗದರ್ಶನ ನೀಡಲಿದ್ದಾರೆ. ಕೃಷ್ಣ ಕುಮಾರ್ ಸ್ವತಃ ಕರ್ನಾಟಕ ಸಂಗೀತಕಾರರು, ಹಿನ್ನಲೆ ಗಾಯಕರು, ಮತ್ತು ಸಂಗೀತ ಸಂಯೋಜಕರು ಕೂಡ.

ಹೆಚ್ಚಿನ ವಿವರಗಳಿಗಾಗಿ ೯೮೪೫೨೮೬೩೦೩ ಸಂಪರ್ಕಿಸಬಹುದು ಅಥವಾ ಈ ಅಂತರ್ಜಾಲ ವಿಳಾಸ ಮತ್ತು ಇಮೇಲ್ ಐಡಿಗಳನ್ನು ಬಳಸಬಹುದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com