ರಕ್ಷಿತ್ ಶೆಟ್ಟಿ ಜೊತೆ ಸಿನೆಮಾ ಮಾಡಲಿರುವ ಬಿ ಎಂ ಗಿರಿರಾಜ್

ಮೈತ್ರಿ ಗೆಲುವಿನ ಖುಷಿಯಲ್ಲಿರುವ ಬಿ ಎಂ ಗಿರಿರಾಜ್ ಅವರಿಗೆ ಮತ್ತೊಂದು ಸಂತಸದ ಸುದ್ದಿ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಲನಚಿತ್ರದ ಮುಕ್ತಾಯದ
ನಟ ರಕ್ಷಿತ್ ಶೆಟ್ಟಿ
ನಟ ರಕ್ಷಿತ್ ಶೆಟ್ಟಿ
Updated on: 

ಬೆಂಗಳೂರು: ಮೈತ್ರಿ ಗೆಲುವಿನ ಖುಷಿಯಲ್ಲಿರುವ ಬಿ ಎಂ ಗಿರಿರಾಜ್ ಅವರಿಗೆ ಮತ್ತೊಂದು ಸಂತಸದ ಸುದ್ದಿ. 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಲನಚಿತ್ರದ ಮುಕ್ತಾಯದ ನಂತರ ನಟ ರಕ್ಷಿತ್ ಶೆಟ್ಟಿ ನಿರ್ದೇಶಕ ಬಿ ಎಂ ಗಿರಿರಾಜ್ ಅವರ ಚಲನಚಿತ್ರದಲ್ಲಿ ನಟಿಸಲಿದ್ದಾರೆ.

ಮೇನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿರುವ ಸಿನೆಮಾ ಬಗ್ಗೆ ಮಾತನಾಡಿದ ನಟ "ಈ ಚಲನಚಿತ್ರವನ್ನು ನಿರ್ಮಿಸುತ್ತಿರುವ ಕೆ ಮಂಜು ಅವರಿಗೆ ನಾನು ಭರವಸೆ ನೀಡಿದ್ದೆ. ಅಲ್ಲದೆ ಇದರಲ್ಲಿ ಗಹನವಾದ ವಿಷಯವಿದೆ ಮತ್ತು ಪ್ರತಿ ಸಿನೆಮಾಗೂ ನ್ಯಾಯ ಒದಗಿಸುವ ಗಿರಿರಾಜ್ ಮೇಲೆ ವಿಶ್ವಾಸವಿದೆ. ಸಿನೆಮಾದ ವಿಷಯ ಗೊತ್ತಾಗಿದೆ ಇನ್ನು ನಾಲ್ಕೈದು ದಿನಗಳಲ್ಲಿ ಸಿನೆಮಾದ ಸಂಪೂರ್ಣ ಸಂಪೂರ್ಣ ಕಥೆ ಕೇಳಿಸಿಕೊಳ್ಳಲಿದ್ದೇನೆ" ಎನ್ನುತ್ತಾರೆ ರಕ್ಷಿತ್ ಶೆಟ್ಟಿ.

ಸದ್ಯಕ್ಕೆ ಮಲಯಾಳಮ್ ಭಾಷೆಯಲ್ಲಿ ಮೈತ್ರಿ ಚಿತ್ರೀಕರಣದಲ್ಲಿ ನಿರತರಾಗಿರುವ ಗಿರಿರಾಜ್, ಜೊತೆಜೊತೆಗೆ ರಕ್ಷಿತ್ ಶೆಟ್ಟಿ ಅವರ ಈ ಸಿನೆಮಾ ಸ್ಕ್ರಿಪ್ಟ್ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. "'ಡೆಡ್ ಆರ್ ಅಲೈವ್' ಎಂಬ ತಾತ್ಕಾಲಿಕ ಶೀರ್ಷಿಕೆ ನೀಡಿದ್ದೇವೆ. ಮಲಯಾಳಂ ಮೈತ್ರಿ ಚಿತ್ರೀಕರಣ ಮುಗಿದ ನಂತರ, ಈ ಹೊಸ ಸ್ಕ್ರಿಪ್ಟ್ ಹಿಡಿದು ಉಳಿದ ತಾರಾಗಣವನ್ನು ಅಂತಿಮಗೊಳಿಸುತ್ತೇನೆ" ಎನ್ನುತ್ತಾರೆ ಗಿರಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com