‘ರಾಟೆ’... ರಾಜ ರಾಣಿ ಕಥೆ ಈ ವಾರ ತೆರೆಗೆ

ಧನಂಜಯ್ ಕುಮಾರ್ ಹಾಗೂ ಶ್ರುತಿ ಹರಿಹರನ್
ಧನಂಜಯ್ ಕುಮಾರ್ ಹಾಗೂ ಶ್ರುತಿ ಹರಿಹರನ್
Updated on

ಮತ್ತೊಂದು ಮನಸೆಳೆಯುವ ಸಿನಿಮಾ ರಾಟೆ. ನಿರ್ದೇಶಕ ಎ ಪಿ ಅರ್ಜುನ್ ಅವರಿಂದ ಈ ಶುಕ್ರವಾರ ಬಿಡುಗಡೆ ಆಗುತ್ತಿದೆ. ಅದೇ `ರಾಟೆ'...ರಾಜ ರಾಣಿ ಕಥೆ. ಇದು ಆ ಬೀಟ್ಸ್ ಅಡಿಯಲ್ಲಿ ನಿರ್ಮಾಣ ಆಗಿರುವ ಸಿನಿಮಾ.

`ಅಂಬಾರಿ ಹಾಗೂ ಅದ್ಧೂರಿ'ಯಿಂದ ಜಯಭೇರಿ ಸಾಧಿಸಿದ ಅರ್ಜುನ್ ಅವರು ಹ್ಯಾಟ್ರಿಕ್ ಗಳಿಸುವ ಎಲ್ಲ ಸಾಧ್ಯತೆಗಳು ಇವೆ. ಇದು ಪ್ರೀತಿಯ ರಾಟೆ. ಪ್ರೀತಿಯನ್ನು ಕಾಪಾಡುವ ಪರಿಯನ್ನು ನಿರ್ದೇಶಕ ಅರ್ಜುನ್ ಅವರು ಸುಂದರವಾಗಿ ತೆರೆಯಮೇಲೆ ಬಿಡಿಸಿದ್ದಾರೆ. ಜೀವನದ ರಾಟೆ ತಿರುಗಿಸೋನು ಆ ದೇವರು. ಜೀವನ ಅಂದುಕೊಂಡ ಹಾಗೆ ಅಲ್ಲ ಎಂದು ಘಟನೆಗಳ ಮೂಲಕ ಹೇಳುತ್ತಾ ಹೋಗುತ್ತಾರೆ `ರಾಟೆ' ಚಿತ್ರದಲ್ಲಿ. ಕಥೆ, ಚಿತ್ರಕಥೆ, ಸಂಭಾಷಣೆ ಸಹ ಎ ಪಿ ಅರ್ಜುನ್ ಅವರೇ ಬರೆದಿದ್ದಾರೆ.

`ರಾಟೆ'...ರಾಜ ರಾಣಿ ಕಥೆ ಒಂದು ಮುಗ್ಧ ಪ್ರೇಮಿಗಳ ಪಯಣ. ನಿರ್ದೇಶಕರು ಈ ಸಿನಿಮಾಕ್ಕಾಗಿ ಬೆಟ್ಟ, ಗುಡ್ಡ, ಕಾಡು ಎಲ್ಲ ಸುತ್ತಿ ಬಂದಿದ್ದಾರೆ. ಕಿಚ್ಚ ಸುದೀಪ್ ಆವರು ಹಾಡಿರುವ ಹಾಡಿನ ಚಿತ್ರೀಕರಣ ದಾಂಡೇಲಿಯ ದಟ್ಟವಾದ ಕಾಡಿನಲ್ಲಿ ಕಡಿಮೆ ಬೆಳಕಿನಲ್ಲಿ ನೈಜವಾಗಿ ಛಾಯಾಗ್ರಹಣ ಮಾಡುವದಕ್ಕೆ ಹೆಸರಾದ ಸತ್ಯ ಹೆಗ್ಡೆ ಅವರು ಚಿತ್ರೀಕರಿಸಿದ್ದಾರೆ. ಚಿತ್ರದ ಐದು ಹಾಡುಗಳಿಗೆ ವಿ ಹರಿಕೃಷ್ಣ ಅವರು ಸಂಗೀತ ನೀಡಿದ್ದಾರೆ.

ಧನಂಜಯ್ ಕುಮಾರ್ ಹಾಗೂ ಶ್ರುತಿ ಹರಿಹರನ್ ಅವರ ಮುಖ್ಯ ತಾರಾಗಣದ `ರಾಟೆ' ಚಿತ್ರಕ್ಕೆ ದೀಪು ಎಸ್ ಕುಮಾರ್ ಅವರ ಸಂಕಲನ, ರವಿವರ್ಮ ಅವರ ಸಾಹಸ ಸಂಯೋಜನೆ, ಇಮ್ರಾನ್ ಸರ್ದಾರಿಯ, ಕಲೈ ಅವರ ನೃತ್ಯ ನಿರ್ದೇಶನ, ರಾಜನ್ ಅವರ ಎಫೆಕ್ಟ್ಸ್, ಇದೆ. ಎಚ್ ಕುಮಾರ್ ಕೆಂಚನಹಳ್ಳಿ ಅವರು ಚಿತ್ರದ ಸಹ ನಿರ್ಮಾಪಕರು. ಯೋಗರಾಜ್ ಭಟ್, ಎ ಪಿ ಅರ್ಜುನ್ ಅವರ ಗೀತ ಸಾಹಿತ್ಯ ಈ ಚಿತ್ರಕ್ಕೆ ಇದೆ.
ಪೋಷಕ ಪಾತ್ರದಲ್ಲಿ ಬುಲೆಟ್ ಪ್ರಕಾಶ್, ಸುಚೇಂದ್ರ ಪ್ರಸಾದ್, ಉದಯ್, ಮೋಹನ್ ಜುನೇಜ ಹಾಗೂ ಇತರರು ಚಿತ್ರದಲ್ಲಿ ಇದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com