ರಾಕೆಟ್: ನಾಲ್ಕು ನಿಮಿಷದ ಅತಿ ದೊಡ್ಡ ಬಜೆಟ್ ಫೈಟ್

ತಮ್ಮ ಮುಂದಿನ ಚಲನಚಿತ್ರಕ್ಕೆ ತಾವೇ ನಿರ್ಮಾಪಕರಾಗಿರುವ ನಟ ನೀನಾಸಮ್ ಸತೀಶ್, ದೊಡ್ಡ ಬಜೆಟ್ಟಿನ ವೈಭವಪೂರ ಫೈಟ್ ಒಂದನ್ನು
ರಾಕೆಟ್ ಸಿನೆಮಾದ ಸ್ಟಿಲ್
ರಾಕೆಟ್ ಸಿನೆಮಾದ ಸ್ಟಿಲ್

ಬೆಂಗಳೂರು: ತಮ್ಮ ಮುಂದಿನ ಚಲನಚಿತ್ರಕ್ಕೆ ತಾವೇ ನಿರ್ಮಾಪಕರಾಗಿರುವ ನಟ ನೀನಾಸಮ್ ಸತೀಶ್, ದೊಡ್ಡ ಬಜೆಟ್ಟಿನ ವೈಭವಪೂರ ಫೈಟ್ ಒಂದನ್ನು ಚಿತ್ರೀಕರಿಸಲು ಖ್ಯಾತ ಸ್ಟಂಟ್ ಮಾಸ್ಟರ್ ರವಿ ವರ್ಮಾ ಅವರ ಮೊರೆ ಹೋಗಿದ್ದಾರೆ. ಈ ನಾಲ್ಕು ನಿಮಿಷದ ಫೈಟ್ ಇಡಿ ಚಿತ್ರವನ್ನು ಎತ್ತಿ ಹಿಡಿಯುತ್ತದೆ ಎಂಬ ನಂಬಿಕೆ ಸತೀಶ್ ಅವರದ್ದು.

ಸತೀಶ್ ಪಿಕ್ಚರ್ ಲಾಂಛನದಡಿ ಮೂಡಿ ಬರುತ್ತಿರುವ ಈ ಸಿನೆಮಾಗಾಗಿ ನಟ ನೀನಾಸಮ್ ಸತೀಶ್, ನಾಲ್ಕು ದಿನಗಳು ಚಿತ್ರೀಕರಣಗೊಂಡ ನಾಲ್ಕು ನಿಮಿಷದ ಫೈಟಿಗಾಗಿ ಪೂರ್ಣ ಎರಡು ತಿಂಗಳು ತರಬೇತಿ ಪಡೆದಿದ್ದಾರಂತೆ. "ಈ ಫೈಟ್ ದೃಶ್ಯಾವಳಿ ನನ್ನಿಂದ ೬ ಸಂಖ್ಯೆ ಮೊತ್ತವನ್ನು ವ್ಯಯಿಸಿತು. ದುಡ್ಡಿಗಿಂತ ಹೆಚ್ಚಾಗಿ ಇದೇ ಮೊದಲ ಬಾರಿ ಕಮರ್ಶಿಲ್ ಫೈಟ್ ದೃಶ್ಯಾವಳಿಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದೇನೆ. ನನ್ನ ವೃತ್ತಿ ಜೀವನ ಅತಿ ಉತ್ಸುಕ ಕ್ಷಣ ಇದು. ಎಡಿಟಿಂಗ್ ಸಮಯದಲ್ಲಿ ದೃಶ್ಯಗಳನ್ನು ನೋಡಿ ಥ್ರಿಲ್ ಆದೆ" ಎನ್ನುತ್ತಾರೆ ಸತೀಶ್.

ಶಿವಶಶಿ ಈ ಸಿನೆಮಾವನ್ನು ನಿರ್ದೇಶಿಸುತ್ತಿದ್ದು, ಅದ್ವೈತ ಗುರುಮೂರ್ತಿ ಸಿನೆಮಾದ ಕ್ಯಾಮರಾಮ್ಯಾನ್. ಈಗ ಸಿನೆಮಾ ಡಬ್ಬಿಂಗ್ ಹಂತದಲ್ಲಿದ್ದು ಇನ್ನು ಕೆಲವೇ ಹಾಡುಗಳ ಮತ್ತು ಸ್ಟಂಟ್ ಗಳ ಚಿತ್ರೀಕರಣ ಉಳಿದಿದ್ದು, ಶೀಘ್ರದಲ್ಲೆ ಬಿಡುಗಡೆ ಕಾಣಲಿದೆ ಎನ್ನುತ್ತಾರೆ ಸತೀಶ್. "ಇನ್ನೆರಡು ಸಿನೆಮಾಗಳಿಗೆ ಕಾಲ್ ಶೀಟ್ ನೀಡಿದ್ದೇನೆ ಆದರೆ ದಿನಾಂಕಗಳು ಅಂತಿಮವಾಗಿಲ್ಲ. ನನ್ನ ಚೊಚ್ಚಲ ನಿರ್ಮಾಣದ ಸಿನೆಮಾದ ಮೇಲೆ ಮನಸ್ಸು ನೆಟ್ಟಿದ್ದೇನೆ. ಮುಂದಿನ ಸಿನೆಮಾದ ಘೋಷಣೆಗೆ ಇನ್ನು ಸ್ವಲ್ಪ ಸಮಯ ಹಿಡಿಯುತ್ತದೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com