
ಬೆಂಗಳೂರು: ಇಂದು ಜನ್ಮ ದಿನ ಆಚರಿಕೊಳ್ಳುತ್ತಿರುವ ಪುನೀತ್ ರಾಜ್ ಕುಮಾರ್ ಅವರಿಗೆ ನಟಿಸಲು ಸಿನೆಮಾಗಳ ಸುರಿಮಳೆಯೇ ಅವರ ಮುಂದಿದೆ. ಈಗಾಗಲೇ ಸುಮಾರ್ ಡಜನ್ ಸಿನೆಮಾಗಳಲ್ಲಿ ಬ್ಯುಸಿಯಾಗಿರುವ ಅವರು ೨೦೧೮ರವರೆಗೆ ತಮ್ಮ ಡೇಟ್ ಗಳನ್ನು ಕಾಯ್ದಿರಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಸ್ಕ್ರಿಪ್ಟ್ ಗಳು ಮೊದಲಿಗೆ ಚೆನ್ನಾಗಿಯೇ ಇರುತ್ತವೆ ಆದರೆ ನಂತರ ಸಮಯ ಕಳೆದಂತೆ ಅವುಗಳನ್ನು ನಾನು ಆಯ್ಕೆ ಮಾಡಿಕೊಳ್ಳುತ್ತಾ ಹೋಗುತ್ತೇನೆ ಎನ್ನುವ ಪುನೀತ್ "ಸದ್ಯಕ್ಕೆ ದೊಡ್ಮನೆ ಹುಡುಗ ಚಿತ್ರೀಕರಣದಲ್ಲಿ ನಿರತನಾಗಿದ್ದೇನೆ, ನಂತರ ಸರವಣನ್ ಮತ್ತು ಸಂತೋಶ್ ಆನಂದರಾಮನ್ ಅವರ ಜೊತೆ ಒಂದೊಂದು ಸಿನೆಮಾ ಮಾಡಲಿದ್ದೇನೆ. ಈ ಎಲ್ಲಾ ಯೋಜನೆಗಳು ಮುಗಿದ ಮೇಲೆ ಆಗಲೇ ನಿಶ್ಚಿತವಾಗಿರುವ ಮತ್ತೊಂದು ಯೋಜನೆ ಪ್ರಾರಂಭವಾಗಲಿದೆ" ಎನ್ನುತ್ತಾರೆ.
ಇವುಗಳೆಲ್ಲದರ ಜೊತೆಗೆ ಪುನೀತ್ ಅವರ ಬಹುನಿರೀಕ್ಷಿತ 'ರಣ ವಿಕ್ರಮ'ದ ಆಡಿಯೋ ಬಿಡುಗಡೆ ಯುಗಾದಿ ಸಮಯದಲ್ಲಿ ಜರುಗಲಿದೆ. ಬಲ್ಲ ಮೂಲಗಳ ಪ್ರಕಾರ ಈ ಸಿನೆಮಾವನ್ನು ರಿಲಾಯನ್ಸ್ ಎಂಟರ್ಟೈನ್ ಮೆಂಟ್ ರಾಷ್ಟ್ರಾದ್ಯಂತ ಬಿಡುಗಡೆ ಮಾಡಲಿದೆ. ಈ ಸಿನೆಮಾದ ಪ್ರಚಾರಕ್ಕೆ ಟಾಟ ಡೋಕೋಮೋ ಸಂಸ್ಥೆ ಕೂಡ ಉತ್ಸುಕವಾಗಿದೆ ಎಂದು ತಿಳಿದುಬಂದಿದೆ.
ಚೇತನ್ ಕುಮಾರ್ ಮತ್ತು ರವಿವರ್ಮ, ಶಿವರಾಜ್ ಕುಮಾರ್ ಅವರೊಂದಿಗೆ ನಿರ್ದೇಶಿಸುತ್ತಿರುವ 'ಜೇಮ್ಸ್' ಸಿನೆಮಾದಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ. ಜಯಣ್ಣ ಪ್ರೊಡಕ್ಷನ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ಬರುತ್ತಿರುವ ಅತಿ ದೊಡ್ಡ ಬಜೆಟ್ ಸಿನೆಮಾ ಇದು ಎಂದು ಬಣ್ಣಿಸಲಾಗಿದೆ.
Advertisement