ಹಿಂಗ್ಯಾಕೆ: ತೆಲುಗು ಮತ್ತು ತಮಿಳಿನಲ್ಲಿ ರಿಮೇಕ್
ಬೆಂಗಳೂರು: ಕನ್ನಡ ಚಿತ್ರರಂಗದ ಸ್ಕ್ರಿಪ್ಟ್ಗಳು ಅನ್ಯ ಭಾಷೆಯಲ್ಲಿ ಮಾನ್ಯತೆ ಪಡೆಯುತ್ತಿರುವುದಕ್ಕೆ ಇಲ್ಲಿದೆ ಒಂದು ಹೊಸ ಉದಾಹರಣೆ. ಖ್ಯಾತ ನಿರ್ದೇಶಕ ಮಾಯಾಮೃಗ ಖ್ಯಾತಿಯ ಟಿ ಎನ್ ಸೀತಾರಾಮ್ ಅವರ ಪುತ್ರ ಸತ್ಯಜಿತ್ ಅವರ ಚೊಚ್ಚಲ ಚಲನಚಿತ್ರ 'ಹಿಂಗ್ಯಾಕೆ' ಈಗ ಸುದ್ದಿಯಲ್ಲಿರುವ ಚಿತ್ರ. ಈ ಸಿನೆಮಾ ತೆಲುಗು ಮತ್ತು ತಮಿಳಿಗೆ ರಿಮೇಕ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಸತ್ಯಜಿತ್ ಅವರೇ ಹೇಳುವ ಪ್ರಕಾರ "ತಮಿಳು ಚಿತ್ರೋದ್ಯಮದ ನಿರ್ದೇಶಕರೊಬ್ಬರು ಸಿನೆಮಾ ನೋಡಿ ಎಷ್ಟು ಸಂತಸಪಟ್ಟರೆಂದರೆ ಬಹುತೇಕ ಅವರು ರಿಮೇಕ್ ಹಕ್ಕುಗಳನ್ನು ಕೊಳ್ಳುವರಿದ್ದಾರೆ" ಎಂದಿರುವ ಅವರು "ನನ್ನ ಸಿನೆಮಾದ ರಿಮೇಕ್ ಹಕ್ಕುಗಳಿಗೆ ಬೇಡಿಕೆ ಬರುತ್ತಿರುವುದು ಸಿನೆಮಾಗೆ ಅತಿ ದೊಡ್ಡ ಹೆಗ್ಗಳಿಕೆ. ಅಧಿಕೃತವಾಗಿ ಸಹಿ ಮಾಡಬೇಕಷ್ಟೆ" ಎಂದಿದ್ದಾರೆ.
ಸಿನೆಮಾಗೆ ಈಗಾಗಲೇ ಸೆನ್ಸಾರ್ ಬೋರ್ಡ್ ನಿಂದ 'ಯು' ಪ್ರಮಾಣಪತ್ರ ದೊರಕಿದ್ದು ಏಪ್ರಿಲ್ ನಲ್ಲಿ ಬಿಡುಗಡೆ ಮಾಡಲಿದ್ದಾರೆ ಎಂದು ಸತ್ಯಜಿತ್ ತಿಳಿಸಿದ್ದಾರೆ. "ಎಲ್ಲವೂ ಚಿತ್ರಮಂದಿರಗಳ ಲಭ್ಯತೆಯ ಮೇಲೆ ನಿಂತಿದೆ" ಎನ್ನುವ ಸತ್ಯಜಿತ್ "ಹಾಸ್ಯ ಭರಿತ ಕುಟುಂಬ ಸಮೇತ ನೋಡಬಹುದಾದ ಸಿನೆಮಾ ಇದು. ಪ್ರತೀಕ್ ಥಕ್ಕರ್ ಮತ್ತು ದೀಪ್ತಿ ಮನೆ ಮುಖ್ಯ ಪಾತ್ರಧಾರಿಗಳು. ಸೂರ್ಯಕಾಂತ್ ಸಿನೆಮಾಟೋಗ್ರಾಫರ್. ನಿತಿನ್ ಕುಮಾರ್ ಹೊಸ ಸಂಗೀತ ಸಿರ್ದೇಶಕ" ಎನ್ನುತ್ತಾರೆ ಎಅವರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ