ಲೂಸಿಯಾ ಖ್ಯಾತಿಯ ನಟ ಸಂಜಯ್ ಐಯ್ಯರ್ ನಿಧನ
ಬೆಂಗಳೂರು: ಇತ್ತೀಚೆಗಷ್ಟೇ ಲೂಸಿಯಾ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟಿದ್ದ ಲೂಸಿಯಾ ಖ್ಯಾತಿಯ ನಟ ಸಂಜಯ್ ಐಯ್ಯರ್ ಗುರುವಾರ ನಿಧರಾಗಿದ್ದಾರೆ ಎಂದು ತಿಳಿದುಬಂದಿದೆ.
ಪವನ್ ಕುಮಾರ್ ನಿರ್ದೇಶನದ ಲೂಸಿಯಾ ಚಿತ್ರದಲ್ಲಿ ಪತ್ತೇದಾರಿ ಪಾತ್ರದಲ್ಲಿ ನಟನೆ ಮಾಡಿ, ಮೊದಲ ಚಿತ್ರದಲ್ಲಿಯೇ ತಮ್ಮ ನಟನೆಯಿಂದ ಕನ್ನಡ ಜನತೆಯ ಮನಮೆಚ್ಚಿಸಿದ್ದ ಸಂಜಯ್ ಐಯ್ಯರ್ ಅವರು ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದಾರೆ.
ಸಂಜಯ್ ಐಯ್ಯರ್ ಅವರೊಂದಿಗೆ ಕೆಲಸ ಮಾಡಿದ್ದು ನನಗೆ ಬಹಳ ಹೆಮ್ಮೆ ಇದೆ. ಅವರ ಅಗಲಿಕೆ ಬಹಳ ನೋವು ತಂದಿದೆ. ನನ್ನೊಬ್ಬನಿಗೆ ಅಲ್ಲ ಅವರ ಎಲ್ಲಾ ಅಭಿಮಾನಿಗಳಿಗೂ ನೋವುಂಟು ಮಾಡಿದೆ. ಅವರನ್ನು ತುಂಬಾ ಮಿಸ್ಸ್ ಮಾಡಿಕೊಳ್ಳುತ್ತಿದ್ದೇನೆ. ಅವರನ್ನು ಮತ್ತೆ ನೋಡಲು ಸಾಧ್ಯವಿಲ್ಲ.
ಉಪ್ಪಿ 2 ಚಿತ್ರದಲ್ಲಿ ಅವರು ನಟಿಸಿರುವುದರಿಂದ ತೆರೆಯ ಮೇಲಷ್ಟೇ ಮತ್ತೆ ನೋಡಲು ಸಾಧ್ಯ. ಸಂಜಯ್ ಅವರಿಗಾಗಿ ನಾನು ನಿರ್ದೇಶಿಸುತ್ತಿರುವ ಸಿ10ಹೆಚ್14ಎನ್2 ಚಿತ್ರದಲ್ಲಿ ಪಾತ್ರ ನೀಡಲಾಗಿತ್ತು. ಆದರೆ ಚಿತ್ರೀಕರಣಕ್ಕೂ ಮೊದಲೇ ಸಂಜಯ್ ಅವರು ನಮ್ಮನ್ನು ಅಗಲಿದ್ದಾರೆಂದು ನಿರ್ದೇಶಕ ಪವನ್ ಕುಮಾರ್ ಅವರು ಸಾಮಾಜಿಕ ತಾಣದಲ್ಲಿ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ