ಕನ್ನಡದ 'ರಾಮಲೀಲಾ'ದಲ್ಲಿ ಚಿರು

ರಿಮೇಕ್ ಮತ್ತು ಸ್ವಮೇಕ್ ಗಳ ಮಧ್ಯ ಓಲಾಡುವ ಚಿರಂಜೀವಿ ಸರ್ಜಾ ಮುಂದಿನ ಸಿನೆಮಾಗೆ ಸಜ್ಜಾಗುತ್ತಿದ್ದಾರೆ. ತಮಿಳು ಸಿನೆಮಾ 'ಪಾಂಡಿಯ ನಾಡು'ವಿನ
ಚಿರಂಜೀವಿ ಸರ್ಜಾ
ಚಿರಂಜೀವಿ ಸರ್ಜಾ

ಬೆಂಗಳೂರು: ರಿಮೇಕ್ ಮತ್ತು ಸ್ವಮೇಕ್ ಗಳ ಮಧ್ಯ ಓಲಾಡುವ ಚಿರಂಜೀವಿ ಸರ್ಜಾ ಮುಂದಿನ ಸಿನೆಮಾಗೆ ಸಜ್ಜಾಗುತ್ತಿದ್ದಾರೆ. ತಮಿಳು ಸಿನೆಮಾ 'ಪಾಂಡಿಯ ನಾಡು'ವಿನ ರಿಮೇಕ್ 'ರುದ್ರತಾಂಡವ' ಇತ್ತೀಚಿಗೆ ಬಿಡುಗಡೆಯಾಗಿ ಸಾಧಾರಣ ಯಶಸ್ಸು ಕಂಡಿದೆ. ಚೈತನ್ಯ ಅವರ 'ಆಟಗಾರ' ದಲ್ಲಿ ಕೂಡ ಚಿರು ನಟಿಸಿದ್ದು ಬಿಡುಗಡೆಗೆ ಸಿದ್ಧವಾಗಿದೆ. ಇದು ಸ್ವಮೇಕ್. ಈಗ ತೆಲುಗಿನ 'ಲೌಕ್ಯಂ' ಸಿನೆಮಾ ಕನ್ನಡದಲ್ಲಿ 'ರಾಮಲೀಲಾ' ಆಗಲಿದ್ದು, ಚಿತ್ರದ ಮುಖ್ಯ ಪಾತ್ರಕ್ಕೆ ಚಿರು ಆಯ್ಕೆಯಾಗಿದ್ದಾರೆ. ಸೌಂದರ್ಯ ಜಗದೀಶ್ ನಿರ್ಮಿಸುತ್ತಿರುವ ಈ ಸಿನೆಮಾಗೆ ವಿಜಯ್ ಕಿರಣ್ ನಿರ್ದೇಶಕ. ಏಪ್ರಿಲ್ ೨ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ತಿಳಿದುಬಂದಿದೆ.

'ರಾಮಲೀಲಾ'ಗೆ ಸ್ಕ್ರೀನ್ಪ್ಲೇ ಕೂಡ ಬರೆದಿರುವ ನಿರ್ದೇಶಕ ವಿಜಯ್, ಚಿರು ಎದುರಿಗೆ ಅಮೂಲ್ಯ ನಟಿಸಲಿದ್ದಾರೆ ಎಂದು ತಿಳಿಸಿದ್ದಾರೆ. ಅನೂಪ್ ರುಬೇನ್ಸ್ ಸಂಗೀತ ನೀಡಲಿದ್ದಾರೆ.

'ಆಟಗಾರ'ನ ಬಗ್ಗೆ ಮಾತನಾಡಿದ ಚಿರು "ಇದು ಪ್ರಯೋಗಾತ್ಮಕ ಚಿತ್ರ. ಕಥೆಗಾಗಿಯೇ ಈ ಚಿತ್ರ ಒಪ್ಪಿಕೊಂಡೆ. ನಾನು ಆಲ್ ರೌಂಡರ್ ಆಗಲು ಬಯಸುತ್ತೇನೆ. ಎಲ್ಲ ತರಹ ಪಾತ್ರಗಳಲ್ಲೂ ನಟಿಸಬೇಕೆಂಬುದು ನನ್ನ ಆಸೆ. ನನ್ನ ಚಲನಚಿತ್ರಗಳನ್ನು ನೋಡಿದರೆ ನಾನು ಭಯ, ಹಾಸ್ಯ, ಕೌಟುಂಬಿಕ, ಮಸಾಲ ಎಲ್ಲ ತರಹದ ಚಿತ್ರಗಳಲ್ಲೂ ನಟಿಸಿದ್ದೇನೆ" ಎಂದಿದ್ದಾರೆ ಚಿರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com