
ಮುಂಬೈ: ರಣಬೀರ್ ಕಪೂರ್ ಮತ್ತು ಅನುಷ್ಕಾ ಶರ್ಮಾ ನಟನೆಯ 'ಬಾಂಬೆ ವೆಲ್ವೆಟ್' ಟ್ರೇಲರ್ ಕಳೆದ ವಾರ ಬಿಡುಗಡೆಯಾಗಿದ್ದು, ಇದರ ಬಗ್ಗೆ ಚಿತ್ರೋದ್ಯಮದ ಅನಿಸಿಕೆ ಒಡೆದುಹೋಗಿದ್ದರೆ ರಣಬೀರ್ ಅವರ ಗರ್ಲ್ಫ್ರೆಂಡ್ ಕತ್ರಿನಾ ಕೈಫ್ ಟ್ರೇಲರ್ ಅನ್ನು ಮನಸಾರೆ ಪ್ರಶಂಸಿಸಿದ್ದಾರೆ.
"ಟ್ರೇಲರ್ ಅಧ್ಬುತವಾಗಿದೆ" ಎಂದಿದ್ದಾರೆ ಕತ್ರಿನಾ. ಅಲ್ಲದೆ ರಣಬೀರ್ ಮತ್ತು ಅನುಷ್ಕಾ ಅವರ ನಟನೆ ಸ್ಪೂರ್ಥಿದಾಯಕವಾಗಿದೆ ಎಂದು ಕೂಡ ಹೇಳಿದ್ದಾರೆ. "ಕೆಲಸವನ್ನು ಸ್ವಲ್ಪ ವಿಭಿನ್ನವಾಗಿ ಮಾಡುವುದು ಸ್ಪೂರ್ಥಿದಾಯಕವಾಗಿರುತ್ತದೆ. ಹೃದಯಸ್ಪರ್ಶಿ, ವಿಭಿನ್ನ ಮತ್ತು ಅಧ್ಬುತ ಕೆಲಸವಾಗಿ ಕಾಣುತ್ತದೆ. ಅನುರಾಗ್ ಕಶ್ಯಪ್ ಅತ್ಯುತ್ತಮ ನಿರ್ದೇಶಕ ಅವರ ಸಿನೆಮಾದಲ್ಲಿ ನನಗೂ ನಟಿಸಲು ಇಷ್ಟ. ಅವರು (ಬಾಂಬೆ ವೆಲ್ವೆಟ್ ಚಿತ್ರ ತಂಡ) ಅದ್ಭುತವಾದ ಕೆಲಸ ಮಾಡಿದ್ದಾರೆ. ಅವರಿಗೆ ಅಭಿನನಂದನೆಗಳು" ಎಂದಿದ್ದಾರೆ ಕತ್ರಿನಾ.
ಸಿನೆಮಾದಲ್ಲಿ ರಣಬೀರ್ ಅವರ ರೆಟ್ರೋ ಶೈಲಿಯ ನಟನೆಯನ್ನು ಪ್ರಶಂಸಿಸಿರುವ ಕತ್ರಿನಾ "ತುಂಬಾ ಚೆನ್ನಾಗಿ ಮಾಡಿದ್ದಾರೆ" ಎಂದಿದ್ದಾರೆ.
Advertisement