ನವದೆಹಲಿ: ವಿಶ್ವಕಪ್ 2015 ಭಾರತದ ಸೋಲಿಗೆ ದೇಶಾದಾದ್ಯಂತ ಇತ್ತ ಅಸಮಾಧಾನ ವ್ಯಕ್ತವಾಗುತ್ತಿದ್ದರೆ, ಅತ್ತ ಬಾಲಿವುಡ್ ನ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಭಾರತದ ಸೋಲಿಗೆ ಸಂಸತ ವ್ಯಕ್ತಪಡಿಸುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ...!
ವಿವಾದಾತ್ಮಕ ಟ್ವೀಟ್ ಗಳ ಮೂಲಕ ಸುದ್ದಿಯಲ್ಲಿರುತ್ತಿದ್ದ, ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇದೀಗ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತದ ಸೋಲಿಗೆ ಸಂತಸ ವ್ಯಕ್ತಪಡಿಸುವ ಮೂಲಕ ಈಗ ಮತ್ತೆ ಸುದ್ದಿಗೆ ಬಂದಿದ್ದಾರೆ.
ಭಾರತ-ಆಸ್ಟ್ರೇಲಿಯಾ ಸೆಮಿಫೈನಲ್ ಹಣಾಹಣಿಯಲ್ಲಿ ಭಾರತ ಸೋತಿದ್ದು ಒಳ್ಳೆಯದಾಯಿತು. ಕ್ರಿಕೆಟ್ ನಲ್ಲಿ ಭಾರತದ ಸೋಲು ನನಗೆ ಬಹಳ ಸಂಸತ ತಂದಿದೆ ಎಂದು ತಮ್ಮ ಟ್ವಿಟರ್ ಖಾತೆಯ ಮೂಲಕ ಸಂಸತ ಹಂಚಿಕೊಂಡಿದ್ದಾರೆ. ಭಾರತದ ಜನರಿಗೆ ಕ್ರಿಕೆಟ್ ಎಂಬ ಹುಚ್ಚು ಹಿಡಿದಿದೆ. ಕ್ರಿಕೆಟ್ ಕೆಲಸ ಮಾಡುವ ಜನರನ್ನು ಹಾಳುಮಾಡುತ್ತಿದೆ. ನಾನು ದೇವರನ್ನು ಕೇಳಿಕೊಳ್ಳುವುದಿಷ್ಟೇ ನಮ್ಮ ದೇಶಕ್ಕೆ ಹಿಡಿದಿರುವ ಕ್ರಿಕೆಟ್ ಎಂಬ ಮಾಹಾಮಾರಿ ಹುಚ್ಚನ್ನು ದೂರಗೊಳಿಸು ಎಂದು.
Advertisement