20 ವರ್ಷಗಳ ನಂತರ ಹಿಂದಿ ಹಿನ್ನೆಲೆ ಗಾಯನಕ್ಕೆ ಮತ್ತೆ ಮರಳಿದ ಡಾ. ಯೇಸುದಾಸ್

ಅದ್ಭುತ ಹಾಡುಗಾರ ಮತ್ತು ಏಳು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ ಪ್ರಸಿದ್ಧ ಭಾರತೀಯ ಶಾಸ್ತ್ರೀಯ ಸಂಗೀತಗಾರ ಮತ್ತು ಪ್ರಸಿದ್ಧ ಹಿನ್ನೆಲೆ ಗಾಯಕ
ಡಾ. ಯೇಸುದಾಸ್
ಡಾ. ಯೇಸುದಾಸ್

ಬೆಂಗಳೂರು: ಅದ್ಭುತ ಹಾಡುಗಾರ ಮತ್ತು ಏಳು ಬಾರಿ ರಾಷ್ಟ್ರೀಯ ಪ್ರಶಸ್ತಿ ವಿಜೇತರಾದ  ಪ್ರಸಿದ್ಧ ಭಾರತೀಯ ಶಾಸ್ತ್ರೀಯ ಸಂಗೀತಗಾರ ಮತ್ತು ಪ್ರಸಿದ್ಧ ಹಿನ್ನೆಲೆ ಗಾಯಕ ಡಾ. ಯೇಸುದಾಸ್ 20 ವರ್ಷಗಳ ನಂತರ ಹಿಂದಿ ಹಿನ್ನೆಲೆ ಗಾಯನಕ್ಕೆ ಮತ್ತೆ ಮರಳಿದ್ದಾರೆ.
ಪ್ರಶಸ್ತಿ ವಿಜೇತ ಚಿತ್ರ “ಬೇರ್‍ಫುಟ್ ಟು ಗೋವಾ” ಮೂಲಕ ಮತ್ತೆ ಮರಳಿದ್ದು, ಈ ಸಿನೆಮಾ ಏಪ್ರಿಲ್ 10 ರಂದು ಭಾರತದಾದ್ಯಂತ ತೆರೆಕಾಣಲಿದೆ

ಇದು ಇಬ್ಬರು ಮಕ್ಕಳು ತಮ್ಮ ಅಜ್ಜಿಯನ್ನು ಹುಡುಕುತ್ತಾ ಗೋವಾಗೆ ಪ್ರಯಾಣಿಸುವ ಕಥೆಯನ್ನು ಒಳಗೊಂಡಿದೆ.

ಯೇಸುದಾಸ್ ಹಾಡಲು ಪೂರ್ಣಗೊಳಿಸಲು ನಾಲ್ಕು ಗಂಟೆಗಳು ತೆಗೆದುಕೊಂಡಿದ್ದು ಇದನ್ನು ಚೆನ್ನೈನಲ್ಲಿರುವ ಎ ಆರ್ ರೆಹಮಾನ್ ಸ್ಟುಡಿಯೋದಲ್ಲಿ ರೆಕಾರ್ಡ್ ಮಾಡಲಾಯಿತು.

“ಕಥೆ ಕೇಳಿದ ಮತ್ತು ಟ್ರೈಲರ್ ನೋಡಿದ ನಂತರ ನಾನು ಈ ಹಾಡನ್ನು ಹಾಡಲು ನಿರ್ಧರಿಸಿದೆ” ಎಂದು ಯೇಸುದಾಸ್ ಹೇಳಿದ್ದಾರೆ. ರೋಹಿತ್‍ರವರಿಂದ ರಚಿಸಲ್ಪಟ್ಟ ಸುಂದರ ಹಾಡು ನನ್ನನ್ನು ನನ್ನ ಹಳೆಯ ದಿನಗಳಿಗೆ ಮರಳಿ ಕೊಂಡೊಯ್ದು ಸಂಗೀತ ಪ್ರಪಂಚದಲ್ಲಿನ ನನ್ನ ಪ್ರಯಾಣವನ್ನು ನೆನಪಿಸಿದೆ” ಎಂದೂ ಹೇಳಿದ್ದಾರೆ. “ದೋ ನೈನಾ” ಹಾಡು ತಾಯಿ ಮತ್ತು ಆಕೆಯ ಮಗುವಿನ ನಡುವಿನ ಸಂಬಂಧಕ್ಕೆ ಭಾವನಾತ್ಮಕ ಕಾಣಿಕೆಯಾಗಿದೆ.

ಬೇರ್‍ಫುಟ್ ಟು ಗೋವಾ ಚಿತ್ರದ ನಿರ್ದೇಶಕ ಪ್ರವೀಣ್ ಮೊರ್ಚಾಲೇ, “ನಾನು ಅವರ ಸಂಗೀತದಿಂದ ಪ್ರಭಾವಿತನಾಗಿದ್ದೇನೆ ಮತ್ತು ಬಾಲಿವುಡ್‍ನಲ್ಲಿ 20 ವರ್ಷಗಳಿಂದ ಅವರ ಧ್ವನಿಯನ್ನು ಮಿಸ್ ಮಾಡಿದ್ದೇನೆ. ನನ್ನ ಚಿತ್ರದ ಮೂಲಕ ಅವರನ್ನು ಮರಳಿ ತರುವ ಈ ಅವಕಾಶವನ್ನು ಕಳೆದುಕೊಳ್ಳಲು ನಾನು ಸಿದ್ಧನಿರಲಿಲ್ಲ” ಎಂದು ಹೇಳಿದ್ದಾರೆ. ನಾವು ಮೊದಲು ಯೇಸುದಾಸ್‍ರವರನ್ನು ಸಂಪರ್ಕಿಸಿದಾಗ, ಅವರು ಖಂಡಿತಾ ನಮಗೆ ಹಾಡಲು ಒಪ್ಪುತ್ತಾರೆಂದು ನಿರೀಕ್ಷಿಸಿರಲಿಲ್ಲ; ಆದರೆ ಅವರು ನಮ್ಮ ಚಲನಚಿತ್ರ ಮತ್ತು ಹಾಡಿನ ಬಗ್ಗೆ  ತಿಳಿದ ನಂತರ, ನಮ್ಮ ಚಿತ್ರಕ್ಕೆ ಹಾಡಲು ಬಹಳ ಸಂತೋಷಪಟ್ಟರು ಮತ್ತು ಈ ಅತ್ಯದ್ಭುತ ಧ್ವನಿಯನ್ನು ಮತ್ತೆ ನಮ್ಮ ಚಿತ್ರದ ಮೂಲಕ ಹಿಂದಿ ಸಿನೆಮಾದಲ್ಲಿ ಕೇಳುವಂತಾಗುತ್ತಿರುವುದು ನಿಜಕ್ಕೂ ನಮಗೆ ಸಂತೋಷ ನೀಡಿದೆ” ಎಂದು ಹೇಳಿದರು.

ಚಿತ್ರವು ಇಬ್ಬರು ಮಕ್ಕಳು ಮುಂಬೈನಿಂದ ಗೋವಾಗೆ ಕ್ಯಾನ್ಸರ್ ಪೀಡಿತ ಮತ್ತು ಪೋಷಕರಿಂದ ನಿರ್ಲಕ್ಷಿತರಾದ ತಮ್ಮ ಅಜ್ಜಿಯನ್ನು ಹುಡುಕುತ್ತಾ ಪ್ರಯಾಣಿಸುವ ಕಥೆಯನ್ನು ಹೊಂದಿದೆ. ಇದು ಎಳೆಯ ಮನಸ್ಸುಗಳ ಮುಗ್ಧತೆ ತೋರಿಸುವ, ವಯಸ್ಕರ ಬೇಧಭಾವವನ್ನು ಅಣಕಿಸುವ ಮತ್ತು ಹಿರಿಯ ಜೀವದ ಏಕಾಂಗಿತನಕ್ಕೆ ದುಃಖಿಸುವ ಹಾಗೂ ಕಳೆದುಹೋಗುತ್ತಿರುವ ಮಾನವ ಸಂಬಂಧಗಳ ಕಥೆಯಾಗಿದೆ. ಚಿತ್ರ ನೋವಿನಲ್ಲಿ ಪ್ರಶಾಂತತೆಯಾಗಿ ಕಂಡುಬರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com