'ಮೈತ್ರಿ' ನೋಡಲು ಆಸಕ್ತಿ ತೋರಿದ ಮುಖ್ಯಮಂತ್ರಿ

ಬಿಡುಗಡೆಯಾಗಿ ೪೦ ದಿನ ಕಳೆದರೂ ನಟ ಪುನೀತ್ ರಾಜಕುಮಾರ್ ಮತ್ತು ಮೋಹನ್ ಲಾಲ್ ಅಭಿನಯದ 'ಮೈತ್ರಿ' ಚಲನಚಿತ್ರ ಇನ್ನೂ ಚಾಲ್ತಿಯಲ್ಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಟ ಪುನೀತ್
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ನಟ ಪುನೀತ್

ಬೆಂಗಳೂರು: ಬಿಡುಗಡೆಯಾಗಿ ೪೦ ದಿನ ಕಳೆದರೂ ನಟ ಪುನೀತ್ ರಾಜಕುಮಾರ್ ಮತ್ತು ಮೋಹನ್ ಲಾಲ್ ಅಭಿನಯದ 'ಮೈತ್ರಿ' ಚಲನಚಿತ್ರ ಇನ್ನೂ ಚಾಲ್ತಿಯಲ್ಲಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಿನೆಮಾ ನೋಡುವ ಆಸಕ್ತಿ ವ್ಯಕ್ತಪಡಿಸಿದ್ದಾರೆ.

ಅತ್ಯುತ್ತಮ ಸಿನೆಮಾಗಳನ್ನು ನೋಡುವ ಹವ್ಯಾಸ ಇಟ್ಟುಕೊಂಡಿರುವ ಮುಖ್ಯಮಂತ್ರಿ ಅವರಿಗೆ 'ಮೈತ್ರಿ' ಬಗ್ಗೆ ಅಧಿಕಾರಿಗಳು ತಿಳಿಸಿದ್ದಾರೆ. ಅದರಲ್ಲಿರುವ ಸಂದೇಶದ ಬಗ್ಗೆ ಸಿದ್ದರಾಮಯ್ಯನವರಿಗೆ ತಿಳಿಸಿದ್ದಾರೆ. ಕುಣಿಗಲ್ ನಲ್ಲಿ ನಡೆದ ಒಂದು ಸಮಾರಂಭದಲ್ಲಿ ಪುನೀತ್ ರಾಜಕುಮಾರ್ ಜೊತೆ ವೇದಿಕೆಯಲ್ಲಿದ್ದ ಸಿದ್ದರಾಮಯ್ಯ 'ಮೈತ್ರಿ' ಸಿನೆಮಾ ನೋಡುವ ಆಸಕ್ತಿಯನ್ನು ನಿರ್ಮಾಪಕ ರಾಜಕುಮಾರ್ ಅವರಿಗೆ ಹೇಳಿಕೊಂಡಿದ್ದಾರೆ.

"ಹಲವಾರು ಅಧಿಕಾರಿಗಳು ಸಿನೆಮಾ ನೋಡಿ ಇಷ್ಟ ಪಟ್ಟಿದ್ದಾರೆ. ಕೆಂಪಯ್ಯ ಐಪಿಸ್ ಅವರು ಈ ಸಿನೆಮಾ ನೋಡಿ ಸಂತಸಪಟ್ಟು ಮುಖ್ಯಮಂತ್ರಿಗಳು ಈ ಸಿನೆಮಾ ನೋಡಲೇಬೇಕು ಎಂದಿದ್ದರು. ಅವರು ಮೈತ್ರಿಯ ವಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ, ಶೀಘ್ರದಲ್ಲೇ ನಾವು ಮುಖ್ಯಮಂತ್ರಿ ಯಾವಾಗ ಸಿನೆಮಾ ನೋಡಲು ಬಿಡುವಾಗಿರುತ್ತಾರೆ " ಎಂಬುದನ್ನು ತಿಳಿದುಕೊಳ್ಳುತ್ತೇವೆ ಎಂಇದ್ದಾರೆ ರಾಜಕುಮಾರ್.

ಈ ಮಧ್ಯೆ ಮೈತ್ರಿ ಸಿನೆಮಾ ನೋಡಿ ಮೆಚ್ಚಿರುವ ಶಿಕ್ಷಣ ಮಂತ್ರಿ ಕಿಮ್ಮನೆ ರತ್ನಾಕರ್ ಶಾಲೆಗಳಿಗೆ ಪತ್ರ ಬರೆದು ಈ ಸಿನೆಮಾವನ್ನು ಮಕ್ಕಳಿಗೆ ತೋರಿಸುವಂತೆ ಸೂಚಿಸಿದ್ದಾರೆ. "ಈಗ ಬೇಸಿಗೆ ರಜೆ ಪ್ರಾರಂಭವಾಗಿದ್ದು, ಮಕ್ಕಳಿಗಾಗಿ ಪ್ರದರ್ಶನಗಳನ್ನು ಏರ್ಪಡಿಸಲಿದ್ದೇವೆ" ಎನ್ನುತ್ತಾರೆ ರಾಜಕುಮಾರ್.

ಕನ್ನಡ 'ಮೈತ್ರಿ' ನಿರ್ದೇಶಿಸಿದ ಬಿ ಎಂ ಗಿರಿರಾಜ್ ಅವರೇ ಮಲಯಾಳಮ್ ನಲ್ಲೂ  ಚಿತ್ರೀಕರಣ ಮುಗಿಸಿದ್ದಾರೆ. ಈಗ ಸಿನೆಮಾ ಸೆನ್ಸಾರ್ ಮಂಡಲಿ ಮುಂದಿದ್ದು, "ಏಪ್ರಿಲ್ ಮೂರನೆ ವಾರದಲ್ಲಿ ಮಲಯಾಳಮ್ ಅವತರಿಣಿಕೆ ಬಿಡುಗಡೆ ಮಾಡಲಿದ್ದೇವೆ. ತೆಲುಗು ರಿಮೇಕ್ ನಲ್ಲಿ ನಾಗಾರ್ಜುನ ಅವರೊಂದಿಗೆ ಕೂಡ ಕೆಲಸ ಮಾಡುವ ಭರವಸೆ ಇದೆ ಎನ್ನುತ್ತಾರೆ" ನಿರ್ಮಾಪಕ ರಾಜಕುಮಾರ್.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com