ಮದುವೆಯಿಂದಾಚೆಗಿನ ಲೈಂಕಿಕ ಸಂಬಂಧ ಸಬಲೀಕರಣ ಅಲ್ಲ: ಸೊನಾಕ್ಷಿ ಸಿನ್ಹಾ

ಮಹಿಳಾ ಸಬಲೀಕರಣದ ಬಗ್ಗೆ ಅರಿವು ಮೂಡಿಸಲು ನಿರ್ಮಿಸಿರುವ ದೀಪಿಕಾ ಪಡುಕೋಣೆ ಭಾಗವಹಿಸಿರುವ "ಮೈ ಚಾಯ್ಸ್" (ನನ್ನ ಆಯ್ಕೆ) ವಿಡಿಯೋವನ್ನು ಒಪಿಕೊಳ್ಳಲು
ಸೋನಾಕ್ಷಿ ಸಿನ್ಹಾ
ಸೋನಾಕ್ಷಿ ಸಿನ್ಹಾ

ಮುಂಬೈ: ಮಹಿಳಾ ಸಬಲೀಕರಣದ ಬಗ್ಗೆ ಅರಿವು ಮೂಡಿಸಲು ನಿರ್ಮಿಸಿರುವ ದೀಪಿಕಾ ಪಡುಕೋಣೆ ಭಾಗವಹಿಸಿರುವ "ಮೈ ಚಾಯ್ಸ್" (ನನ್ನ ಆಯ್ಕೆ) ವಿಡಿಯೋವನ್ನು ಒಪಿಕೊಳ್ಳಲು ಬಹಳಷ್ಟು ಮಂದಿಗೆ ಆಗಿಲ್ಲ. ಇದರಲ್ಲಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ಕೂಡ ಒಬ್ಬರು.

ಈ ವಿಡಿಯೋದಲ್ಲಿ ಮಹಿಳೆಯ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ದೀಪಿಕಾ ಪಡುಕೋಣೆ, ಮದುವೆಗೆ ಮುಂಚಿನ ಲೈಂಗಿಕತೆ, ಮದುವೆಯಾಚೆಗಿನ ಲೈಂಗಿಕತೆ ನನ್ನ ಆಯ್ಕೆ ಎಂದು ಹೇಳುತ್ತಾರೆ.

"ನೀವು ತೊಡುವ ಬಟ್ಟೆ, ಅಥವಾ ನೀವು ಯಾರ ಜೊತೆ ಲೈಂಗಿಕ ಸಂಪರ್ಕದಲ್ಲಿ ಇರುತ್ತೀರಿ ಎಂಬದು ಮಹಿಳಾ ಸಬಲೀಕರಣ ಅಲ್ಲ. ಸಬಲೀಕರಣ ಎಂಬುದು ಮಹಿಳೆಯರಿಗೆ ದೊರಕುವ ಉದ್ಯೋಗ, ಮಹಿಳೆಯ ಬಲವೃದ್ಧಿ" ಎಂದು ವಿಡಿಯೋ ಬಗ್ಗೆ ತಮ್ಮ ಅನಿಸಿಕೆಗಳನ್ನು ಮಂಗಳವಾರ ಸೊನಾಕ್ಷಿ ವ್ಯಕ್ತಪಡಿಸಿದ್ದಾರೆ.

"ಇದು ಒಳ್ಳೆಯ ಪ್ರಯತ್ನ. ಆದರೆ ಮಹಿಳಾ ಸಬಲೀಕರಣ ಅಗತ್ಯ ಮಹಿಳೆಯರಿಗೆ ದೊರಕಬೇಕು. ಆ ಮಹಿಳೆಯರು ನಾವು ಇರುವುದರಿಂದ ಬಹಳ ದೂರದಲ್ಲಿ ಇದ್ದಾರೆ. ನಾವು ಐಶಾರಾಮಿಯಲ್ಲಿ ಬೆಳೆದು ಬಂದಿದ್ದೇವೆ" ಎಂದಿದ್ದಾರೆ ಸೋನಾಕ್ಷಿ.

"ಮೈ ಚಾಯ್ಸ್" ದೃಶ್ಯಾವಳಿಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆ ದೊರಕುತ್ತಿದೆ. ಕೆಲವರು ದೀಪಿಕಾ ಅವರ ಕೆಲಸವನ್ನು ಹೊಗಳಿ ಹಾಡುತ್ತಿದ್ದರೆ ಕೆಲವರು ಸಾರಸಗಟಾಗಿ ತಳ್ಳಿಹಾಕಿ ತೆಗಳುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com