
ನವದೆಹಲಿ:ಶೇಕ್ಸ್ ಪಿಯರ್ ಕೃತಿಗಳ ಮೇಲಿನ ಅವರ ಪ್ರೀತಿ 'ಮಕ್ಬೂಲ್' ಮತ್ತು 'ಹೈದರ್' ಸಿನೆಮಾಗಳ ಮೂಲಕ ತಿಳಿದುಬರುತ್ತದೆ. ಹೌದು ನಿರ್ದೇಹಕ ವಿಶಾಲ್ ಭಾರದ್ವಾಜ್ ಸಾಹಿತ್ಯಿಕ ಜಗತ್ತಿನಲ್ಲಿ ಶೇಕ್ಸ್ ಪಿಯರ್ ಅತ್ಯುತ್ತಮ ಬರಹಗಾರರಲ್ಲೊಬ್ಬ ಎನ್ನುತ್ತಾರೆ.
"ಶೇಕ್ಸ್ ಪಿಯರ್ ಗಿಂತ ದೊಡ್ಡ ಬರಹಗಾರನಿಲ್ಲ" ಎಂದು ಭಾನುವಾರ ರಾಷ್ಟೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆಯಲ್ಲಿ ತಿಳಿಸಿದ್ದಾರೆ.
'ಹೈದರ್' ಸಿನೆಮಾದ 'ಬಿಸ್ಮಿಲ್' ಹಾಡಿಗೆ ಸುಖ್ವಿಂದರ್ ಸಿಂಗ್ ಅತ್ಯುತ್ತಮ ಹಿನ್ನಲೆ ಗಾಯಕ ಪ್ರಶಸ್ತಿ ಸ್ವೀಕರಿಸಿದ್ದಾರೆ. ಹಾಗೆಯೆ ಭಾರದ್ವಾಜ್ ಅವರು ಅತ್ಯುತ್ತಮ ಸಂಭಾಷಣೆಕಾರ ಹಾಗು ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ; ನಾರ್ವೆ ಮೂಲದ ಸುಧೇಶ್ ಅಧಾನ ಅವರಿಗೆ ಅತ್ಯುತ್ತಮ ನೃತ್ಯ ನಿರ್ದೇಶಕ ಪ್ರಶಸ್ತಿ ಹಾಗೂ ಡಾಲಿ ಅಹ್ಲುವಾಲಿಯಾ ಅವರಿಗೆ ಅತ್ಯುತ್ತಮ ವಸ್ತ್ರ ವಿನ್ಯಾಸಕ ಪ್ರಶಸ್ತಿ ದೊರೆತಿದೆ.
ವಿಜ್ಞಾನ ಭವನದಲ್ಲಿ ನಡೆದ ಸಮಾರಂಭದಲ್ಲಿ ಭಾರದ್ವಾಜ್, ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪ್ರಶಸ್ತಿ ಸ್ವೀಕರಿಸಿದ್ದಾರೆ.
ಶೇಕ್ಸ್ ಪಿಯರ್ ನ 'ಹ್ಯಾಮ್ಲೆಟ್' ಕೃತಿಯ ರೂಪಾಂತರ 'ಹೈದರ್' ಚಲನಚಿತ್ರ. ಭಾರದ್ವಾಜ್ ಅವರ 'ಮಕ್ಬೂಲ್', 'ಓಂಕಾರ' ಸಿನೆಮಾಗಳ ಟ್ರಯಾಲಜಿಯಲ್ಲಿ ಮೂರನೆಯದು. ಮಕ್ಬೂಲ್ ಮತ್ತು ಓಂಕಾರ ಕ್ರಮವಾಗಿ 'ಮ್ಯಾಕ್ಬೆತ್' ಮತ್ತು 'ಒಥೆಲ್ಲೋ' ನಾಟಕಗಳ ರೂಪಾಂತರಗಳು.
"ಶೇಕ್ಸ್ ಪಿಯರ್ ಬರಹಗಳಲ್ಲಿ ತಪ್ಪು ಕಂಡುಹಿಡಿಯಲು ಬಹಳ ಕಷ್ಟ. ಅವರ ಬರವಣಿಗೆಲ್ಲಾ ಒಳ್ಳೆಯ ಗುಣಮಟ್ಟದವು" ಎಂದು ಕೂಡ ಅವರು ಹೇಳಿದ್ದಾರೆ.
Advertisement