
ಮುಂಬೈ: ವಿಮರ್ಶಕರ ಅಪಾರ ಮೆಚ್ಚುಗೆ ಪಡೆದು ಹಲವಾರು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಗಳಿಸಿದ 'ದಿ ಲಂಚ್ ಬಾಕ್ಸ್' ಸಿನೆಮಾದ ನಿರ್ದೇಶಕ ರಿತೇಶ್ ಭಾತ್ರ ಹೊಸ ಸಾಹಸಕ್ಕೆ ಕೈಹಾಕಿದ್ದಾರೆ. ಬೂಕರ್ ಪ್ರಶಸ್ತಿ ಪಡೆದ ಜೂಲಿಯನ್ ಬಾರ್ನ್ಸ್ ಅವರ ಕಾದಂಬರಿ 'ದ ಸೆನ್ಸ್ ಆಫ್ ಎನ್ ಎಂಡಿಂಗ್' ಅನ್ನು ಇಂಗ್ಲೀಶ್ ಸಿನೆಮಾವೊಂದಕ್ಕೆ ಅಳವಡಿಸಲು ಸಿದ್ದರಾಗುತ್ತಿದ್ದಾರೆ. ಈ ಸಿನೆಮಾದಲ್ಲಿ ಆಸ್ಕರ್ ಪ್ರಶಸ್ತಿ ವಿಜೇತ ಜಿಮ್ ಬ್ರಾಡ್ ಬೆಂಟ್ ನಟಿಸಲಿದ್ದಾರೆ.
ಇರ್ಫಾನ್ ಖಾನ್, ನಿಮ್ರತ್ ಕೌರ್ ಮತ್ತು ನವಾಜುದ್ದೀನ್ ಸಿದ್ಧಿಕಿ ಇವರುಗಳನ್ನು ಒಳಗೊಂಡ ಮಧ್ಯಮ ವರ್ಗದ ಪ್ರಣಯ ಕಥೆ 'ದಿ ಲಂಚ್ ಬಾಕ್ಸ್' ನಿರ್ದೇಶಿಸಿ ಭಾತ್ರ ವಿಶ್ವವಿಖ್ಯಾತರಾಗಿದ್ದರು. 'ಟಾಪ್ಸಿ ಟರ್ವಿ', 'ಐರಿಸ್', 'ಮೌಲಿನ್ ರೋಗ್', 'ದ ಐರನ್ ಲೇಡಿ', 'ಹ್ಯಾರಿ ಪಾಟರ್' ಸಿನೆಮಾಗಳಿಂದ ಬ್ರಾಡ್ ಬೆಂಟ್ ಹೆಸರುವಾಸಿ. ಈ ಹೊಸ ಚಿತ್ರದಲ್ಲಿ ತಮ್ಮ ವಕೀಲನಿಂದ ಬರುವ ಪತ್ರದಿಂದ ತಮ್ಮ ಹಿಂದಿನ ಜೀವನದ ಜೊತೆ ಮುಖಾಮುಖಿಯಾಗಿ ತನ್ನ ಬಾಲ್ಯಕಾಲದ ಗೆಳೆಯನ ಆತ್ಮಹತ್ಯೆಯ ಕಾರಣ ಹುಡುಕುವ ವ್ಯಕ್ತಿಯ ಕಥೆಯನ್ನು ಈ ಸಿನೆಮಾ ಅಳವಡಿಸಲಿದೆ.
"ನನ್ನ ಅತಿ ಮೆಚ್ಚುಗೆಯ ಕಾದಂಬರಿಗಳಲ್ಲಿ ಒಂದಾದ ಪುಸ್ತಕವನ್ನು ಸಿನೆಮಾಗೆ ಅಳವಡಿಸಲು ಹಾಗು ಅತ್ಯುತ್ತಮ ತಂಡದೊಂದಿಗೆ ಕೆಲಸ ಮಾಡಲು ಥ್ರಿಲ್ ಆಗಿದ್ದೇನೆ" ಎಂದಿದ್ದಾರೆ ಭಾತ್ರ.
Advertisement