ಪೂಜಾ ಗಾಂಧಿ ಈಗ 'ರಾವಣಿ'

'ಅಭಿನೇತ್ರಿ' ಸೋಲಿನ ನಂತರ ಬಹುದಿನದ ಮಟ್ಟಿಗೆ ಹೆಚ್ಚು ಕಾಣಿಸಿಕೊಳ್ಳದ ನಟಿ ಪೂಜಾ ಗಾಂಧಿ ಈಗ ಮತ್ತೆ ಪುಟಿದೇಳಲು ಸಿದ್ಧತೆ ನಡೆಸಿದ್ದಾರೆ.
ನಟಿ ಪೂಜಾ ಗಾಂಧಿ
ನಟಿ ಪೂಜಾ ಗಾಂಧಿ
Updated on

ಬೆಂಗಳೂರು: 'ಅಭಿನೇತ್ರಿ' ಸೋಲಿನ ನಂತರ ಬಹುದಿನದ ಮಟ್ಟಿಗೆ ಹೆಚ್ಚು ಕಾಣಿಸಿಕೊಳ್ಳದ ನಟಿ ಪೂಜಾ ಗಾಂಧಿ ಈಗ ಮತ್ತೆ ಪುಟಿದೇಳಲು ಸಿದ್ಧತೆ ನಡೆಸಿದ್ದಾರೆ. ತಮ್ಮದೇ ನಿರ್ಮಾಣ ಸಂಸ್ಥೆಯಡಿ 'ರಾವಣಿ' ಸಿನೆಮಾದಲ್ಲಿ ನಟಿಸಲಿದ್ದಾರೆ.

ಅಭಿನೇತ್ರಿ ಸೋಲಿನಿಂದ ತಾವೇನು ಕುಂದಿಲ್ಲ ಎನ್ನುವ ಪೂಜಾ "ಅಭಿನೇತ್ರಿ ಮಾಡಿದ್ದಕ್ಕೆ ನನಗೇನೂ ಬೇಸರವಿಲ್ಲ. ಈ ಸಿನೆಮಾದಿಂದ ನಿರ್ಮಾಣ ಹಂತದಲ್ಲಿ ಹಾಗೂ ನಟನೆಯಲ್ಲಿ ಬಹಳಷ್ಟು ಕಲಿತೆ. ಈ ಸಿನೆಮಾ ನನ್ನ ಹೃದಯಕ್ಕೆ ಹತ್ತಿರವಾದದ್ದು. ಯಾವುದನ್ನು ತೆಗೆದುಕೊಳ್ಳಬೇಕು ಯಾವುದನ್ನು ಬಿಡಬೇಕು ಎಂಬುದನ್ನು ಈ ಸಿನೆಮಾ ಕಲಿಸಿದೆ. ಈ ಸಿನೆಮಾ ನಿರ್ಮಾಣ ಜವಾಬ್ದಾರಿಗಳನ್ನು ಹೊರುವುದನ್ನು ನನಗೆ ಕಲಿಸಿದೆ" ಎನ್ನುತ್ತಾರೆ.

ಅಭಿನೇತ್ರಿ ನಂತರ ಧೀರ್ಘ ಕಾಲದ ವಿರಾಮ ತೆಗೆದುಕೊಂಡ ನಟಿ ವಿವಿಧ ನಿರ್ದೇಶಕರಿಂದ ಸುಮಾರು ೩೦ ಕಥೆಗಳನ್ನು ಕೇಳಿದ ನಂತರ ಕೊನೆಗೆ ಚಕ್ರವರ್ತಿ ಚಂದ್ರಚೂಡ್ ಅವರ ಕಥೆಯನ್ನು ಅಂತಿಮಗೊಳಿಸಿದ್ದಾರೆ.

"ನನ್ನ ಹಿಂದಿನ ಸಿನೆಮಾಗಳಾದ ದಂಡುಪಾಳ್ಯ ಮತ್ತು ಅಭಿನೇತ್ರಿಯಂತೆ ರಾವಣಿ ಕೂಡ ಒಂದು ಸಾಮಾನ್ಯವಲ್ಲದ ಕಥೆ. ನಾನು ಈ ಕಥೆ ಕೇಳಿದಾಗ ಬಹಳ ಶಕ್ತಿಯುತವಾದ ಹಾಗು ಈ ಹಿಂದೆ ಇದನ್ನು ಯಾರು ಮಾಡಿಲ್ಲ ಎಂದೆನೆಸಿತು" ಎನ್ನುತ್ತಾರೆ ಪೂಜಾ.

ಹೆಚ್ಚೇನೂ ಗುಟ್ಟು ಬಿಚ್ಚಿಡದ ಪೂಜಾ, ಇದು ಮಹಿಳಾ ಕೇಂದ್ರಿತ ಸಿನೆಮಾ ಏನಲ್ಲ. ಈ ಸಿನೆಮಾಗೆ ಒಬ್ಬ ಶಕ್ತಿಯುತ ನಾಯಕ ನಟನೂ ಇರುತ್ತಾನೆ. "ಚಕ್ರವರ್ತಿ ಮತ್ತು ನಾನು ಹಲವಾರು ಯೋಜನೆಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದೇವೆ. ರಾಷ್ಟ್ರೀಯ ಟಿ ವಿ ವಾಹಿನಿಗೆ ಕೂಡ ಒಂದು ಯೋಜನೆಗೆ ಒಟ್ಟಿಗೆ ಕೆಲಸ ಮಾಡಲಿದ್ದೇವೆ. ರಾವಣಿ ಪೂರ್ವ ನಿಯೋಜಿತವೇನಲ್ಲ. ಅವರ ಸ್ಕ್ರಿಪ್ಟ್ ಕೇಳಿದ ಮೇಲೆ ಅವರ ಕಥೆ ಇಷ್ಟ ಆಯಿತು. ಅವರು 'ಜನ್ಮ' ಸಿನೆಮಾ ಕೂಡ ಈ ಹಿಂದೆ ನಿರ್ದೇಶಿಸಿದ್ದಾರೆ" ಎನ್ನುತ್ತಾರೆ ಪೂಜಾ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com