ಪ್ರಯೋಗಾತ್ಮಕ ಸಿನೆಮಾಗಳೆಡೆ ಕಿಟ್ಟಿ ಒಲವು

'ನಮಸ್ತೆ ಮೇಡಮ್' ನಲ್ಲಿ ಇತ್ತೀಚೆಗೆ ನಟಿಸಿದ್ದ ನಟ ಶ್ರೀನಗರ ಕಿಟ್ಟಿ ಚಿತ್ರದ ಸೋಲಿನ ನಂತರ ಸುದೀರ್ಘ ವಿರಾಮ ತೆಗೆದುಕೊಂಡು 'ಪಾಪು' ಸಿನೆಮಾಗೆ ಮತ್ತೆ...
ಶ್ರೀನಗರ ಕಿಟ್ಟಿ
ಶ್ರೀನಗರ ಕಿಟ್ಟಿ
Updated on

ಬೆಂಗಳೂರು: 'ನಮಸ್ತೆ ಮೇಡಮ್' ನಲ್ಲಿ ಇತ್ತೀಚೆಗೆ ನಟಿಸಿದ್ದ ನಟ ಶ್ರೀನಗರ ಕಿಟ್ಟಿ ಚಿತ್ರದ ಸೋಲಿನ ನಂತರ ಸುದೀರ್ಘ ವಿರಾಮ ತೆಗೆದುಕೊಂಡು 'ಪಾಪು' ಸಿನೆಮಾಗೆ ಮತ್ತೆ ಉಲ್ಲಸಿತರಾಗಿ ಮರಳಿದ್ದಾರೆ.

'ನಮಸ್ತೆ ಮೇಡಮ್' ನಂತರ ಅವರು ಯಾವುದೇ ಸಿನೆಮ ಯೋಜನೆಗಳ ಬಗ್ಗೆ ಚರ್ಚಿಸಿರುವುದಾಗಲಿ ಅಥವಾ ಸಹಿ ಮಾಡಿರುವುದಾಗಲೀ ಇಲ್ಲ. "ನಾನು ತೆಗೆದುಕೊಂಡ ವಿರಾಮ ಸರಿಯೋ ತಪ್ಪೋ ಗೊತ್ತಿಲ್ಲ ಆದರೆ ಈಗ ಉಲ್ಲಸಿತ ಮನಸ್ಥಿತಿಯಲ್ಲಿ 'ಪಾಪು' ಸಿನೆಮಾದಲ್ಲಿ ನಟಿಸಲು ಒಪ್ಪಿಕೊಂಡಿದ್ದೇನೆ. ಈ ಸಿನೆಮಾ ನಿರ್ದೇಶಕರು ಎಸ್ ಮಹೇಂದರ್" ಎನ್ನುತ್ತಾರೆ ಕಿಟ್ಟಿ.

'ಪ್ರೀತಿ ಯಾವತ್ತೂ ಯೌವ್ವನ' ಎಂಬ ವಿಷಯವನ್ನು ಸಿನೆಮಾ ನಿರ್ವಹಿಸಲಿದೆ ಎನ್ನುತ್ತಾರೆ ಕಿಟ್ಟಿ. ಈ ವಿಷಯವನ್ನು ಕನ್ನಡ ಚಿತ್ರೋದ್ಯಮ ಇನ್ನೂ ಮುಟ್ಟಿಲ್ಲ ಎಂದೆನಿಸಿದೆ ಎನ್ನುತ್ತಾರೆ.

'ಇಂತಿ ನಿನ್ನ ಪ್ರೀತಿಯ' ಸಿನೆಮಾದ ನಟ ಪ್ರಯೋಗಾತ್ಮಕ ಸಿನೆಮಾಗಳಲ್ಲಿ ನಟಿಸುವುದನ್ನು ಬಿಡುವುದಿಲ್ಲ ಅನ್ನುತ್ತಾರೆ. 'ಪಾಪು' ಸಿನೆಮಾದ ಜೊತೆ ಮತ್ತೊಂದು ಯೋಜನೆಯನ್ನು ಒಪ್ಪಿಕೊಂಡಿದ್ದಾರಂತೆ. "ಈ ಸಿನೆಮಾ ಅಥವಾ ನಿರ್ದೇಶಕ ಬಗ್ಗೆ ಚರ್ಚಿಸಲು ಈ ಘಟ್ಟದಲ್ಲಿ ಸಾಧ್ಯವಿಲ್ಲ. ನಿಖಿತಾ ತುಕ್ರಾಲ್ ಜೊತೆ ನಾನು ನಾಯಕನ ಪಾತ್ರ ಮಾಡಲಿದ್ದೇನೆ. ಈ ಸಿನೆಮಾದ ಚಿತ್ರೀಕರಣ ಕೂಡ ಸದ್ಯದಲ್ಲೇ ಪ್ರಾರಂಭವಾಗಲಿದೆ" ಎಂದಿದ್ದಾರೆ ಕಿಟ್ಟಿ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com