ಬೆಂಗಳೂರು: ಭುಜದ ಮೇಲೆ ಶಿವನ ಹಚ್ಚೆ ಹುಯ್ಯಿಸಿಕೊಳ್ಳುವ ಗಣೇಶ್ ಅವರ ಬಹುದಿನದ ಆಸೆ ಸೋಮವಾರ ಪೂರೈಸಿದೆ. ಇದು ಸುಮ್ಮನೆ ಹಾಕಿಸಿಕೊಂಡಿರುವ ಟ್ಯಾಟು ಅಲ್ಲ ಎನ್ನುವ ನಟ ತನ್ನ ನಂಬಿಕೆ ಮತ್ತು ನಡೆಯ ಸಂಕೇತವಾಗಿದೆ ಎನ್ನುತ್ತಾರೆ.
"ಶಿವನ ಹಲವಾರು ವಿನ್ಯಾಸದ ಟ್ಯಾಟುಗಳಿವೆ ಆದರೆ ಶಿವನ ಬಗ್ಗೆ ಹೆಚ್ಚೆಚ್ಚು ಓದಿ ನನ್ನ ಮನಸ್ಸಿನಲ್ಲಿ ಒಂದು ಪರಿಕಲ್ಪನೆ ಸೃಷ್ಟಿಸಿಕೊಂಡು ಈ ಹಚ್ಚೆ ಹುಯ್ಯಿಸಿಕೊಂಡಿದ್ದೇನೆ" ಎಂದು ತಮ್ಮ ಪತ್ನಿ ಶಿಲ್ಪಾ ಅವರನ್ನು ಕೂಡ ಶಿವನ ಟ್ಯಾಟು ಹಾಕಿಸಿಕೊಳ್ಳಲು ಮನವೊಪ್ಪಿಸಿರುವ ಗಣೇಶ್ ಹೇಳುತ್ತಾರೆ.
ಒಂದು ಪರಿಕಲ್ಪನೆಯ ಮೇಲೆಗೆ ಹಾಕಿಸಿಕೊಂಡಿರುವ ಈ ಟ್ಯಾಟು ಬಗ್ಗೆ ಹೇಳುವ ನಟ "ಶಿವನಿಗೆ ಒಂದು ಭುಜದ ಮೇಲೆ ಹಾವಿದೆ. ಹಾಗು ದೇವರು ಕಣ್ಣು ಮುಚ್ಚಿದ್ದಾನೆ. ಎಷ್ಟೇ ಕಷ್ಟ ಇದ್ದರು ಅದು ಶಾಂತಿಯನ್ನು ಸೂಚಿಸುತ್ತದೆ. ಹುಲಿ ಶಕ್ತಿಯನ್ನು ಪ್ರತಿನಿಧಿಸುತ್ತದೆ. ಹಲವಾರು ಸವಾಲುಗಳ ನಡುವೆ ಮುನ್ನುಗ್ಗಬೇಕೆಂದು ಅದು ಸೂಚಿಸುತ್ತದೆ. ತ್ರಿಶೂಲ ಮತ್ತು ಢಮರುಗದ ನಡುವೆ ಒಂದು ಸಣ್ಣ ಕೆಂಪು ಗೆರೆ ಇದೆ. ಇದು ಸೂಚಿಸುವುದೇನೇಂದರೆ ನಮ್ಮ ಉದ್ಯಮದಲ್ಲಿ ಒಂದು ಗೆರೆ ಹಾಕಿಕೊಳ್ಳಬೇಕೆ ಅದೇನೆಂದರೆ ಪ್ರಚಾರ ಬಯಸದೆ ಇರುವುದು. ಆ ಜ್ವಾಲೆ ಅಹಂಕಾರವನ್ನು ಪ್ರತಿನಿಧಿಸುತ್ತದೆ. ಅದು ಎಂದು ತಲೆಗೆ ಹೊಕ್ಕಬಾರದು" ಎಂದು ಅರ್ಥೈಸುತ್ತಾ ಹೋಗುತ್ತಾರೆ ಗಣೇಶ್.
ಟ್ಯಾಟು ವಿಶೇಷಜ್ಞ ಪೃಥ್ವಿ ಗೌಡ ಹೇಳುವಂತೆ ಈ ಹಚ್ಚೆಯಿಂದ ಗಣೇಶ್ ಅವರನ್ನು ವಿಶೇಷ ವ್ಯಕ್ತಿಯನ್ನಾಗಿಸಿದೆಯಂತೆ. ಈ ಹಚ್ಚೆ ಹುಯ್ಯಿಸಿಕೊಳ್ಳುವಾಗ ಗಣೇಶ್ ಯಾವುದೇ ನೋವನ್ನು ತೋರ್ಪಡಿಸಿಕೊಳ್ಳಲಿಲ್ಲ ಎನ್ನುತ್ತಾರೆ ಪೃಥ್ವಿ.
Advertisement