
೫೦ ನೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಬಾಲಿವುಡ್ ಬಾದ್ ಶಾಃ ಶಾರುಕ್ ಖಾನ್ ದೇಶದಲ್ಲಿ ಹೆಚ್ಚುತ್ತಿರುವ ಅಸಹನೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಇಂಡಿಯಾ ಟುಡೆ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಾರುಕ್ ಖಾನ್, ದೇಶಭಕ್ತ ಮಾಡಬಹುದಾದ ದೊಡ್ಡ ತಪ್ಪೆಂದರೆ ದೇಶದ ಜಾತ್ಯಾತೀತತೆಯ ವಿರುದ್ಧ ಹೋಗುವುದು ಎಂದಿದ್ದಾರೆ.
ಹಲವಾರು ಜನ ಪ್ರಶಸ್ತಿ ಹಿಂದಿರುಗಿಸುತ್ತಿರುವ ಬಗ್ಗೆ ಪ್ರಶ್ನಿಸಿ ನೀವೂ ಪ್ರಶಸ್ತಿ ಹಿಂದಿರುಗಿಸಲು ಸಿದ್ಧವೇ ಎಂಬ ಪ್ರಶ್ನೆಗೆ,
"ಹೌದು, ಸಾಂಕೇತಿಕ ನಡೆಯಾಗಿ ಹಿಂದಿರುಗಿಸಬಲ್ಲೆ. ದೇಶದಲ್ಲಿ ಅಶಹನೆ ಇದೆ ಎಂದು ನನಗನ್ನಿಸುತ್ತಿದೆ, ತೀವ್ರ ಅಸಹನೆ ಇದೆ" ಎಂದು ಕಿಂಗ್ ಖಾನ್ ಹೇಳಿದ್ದಾರೆ.
"ನನ್ನ ದೇಶಭಕ್ತಿಯ ಬಗ್ಗೆ ಪ್ರಶ್ನಿಸುವ ಅಧಿಕಾರ ಯಾರಿಗೂ ಇಲ್ಲ" ಎಂದು ಕೂಡ ಅವರು ಹೇಳಿದ್ದಾರೆ.
Advertisement