
ಬೆಂಗಳೂರು: ವಿರಾಮದ ನಂತರ ನಟ ಯಶ್ ತಮ್ಮ ಸಿನೆಮಾ 'ಮಾಸ್ಟರ್ ಪೀಸ್' ನಲ್ಲಿ ಹೆಜ್ಜೆ ಹಾಕಲಿದ್ದಾರಂತೆ. ವೃತ್ತಿಪರ ಡ್ಯಾನ್ಸರ್ ಅಲ್ಲದೆ ಹೋದರು ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕುವುದು ಯಶ್ ಅವರ ಬಲ. ಸಿನೆಮಾದ ಪರಿಚಯದ ಹಾಡಿಗೆ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅವರ ನಿರ್ದೇಶನಲ್ಲಿ ಯಶ್ ಅವರು ಕುಣಿಯಲಿದ್ದಾರೆ. ಈ ಹಾಡಿನ ಚಿತ್ರೀಕರಣ ಬೆಂಗಳೂರು ಮತ್ತು ದುಬೈನ ಕೆಲವು ಭಾಗಗಳಲ್ಲಿ ನಡೆಯಲಿದೆಯಂತೆ.
ಡ್ಯಾನ್ಸ್ ನಲ್ಲಿ ಅತಿ ಹೆಚ್ಚು ಪರಿಣತಿ ಏನೂ ಇಲ್ಲದ ಯಶ್ "ನನ್ನ ನೃತ್ಯ ಪಾತ್ರಕ್ಕೆ ತಕ್ಕಂತಿರುತ್ತದೆ. ಪಾತ್ರದ ಜತೆಗೆ ಹೊಂದಿಕೆಯಿಲ್ಲದಿದ್ದರೆ ನೃತ್ಯವನ್ನು ತುರುಕಬಾರದು" ಎನ್ನುತ್ತಾರೆ ನಟ.
'ಕಿರಾತಕ', 'ಲಕ್ಕಿ' ಮತ್ತು ಸ್ವಲ್ಪ ಮಟ್ಟಿಗೆ 'ಗೂಗ್ಲಿ' ಮತ್ತು 'ಗಜಕೇಸರಿ' ಸಿನೆಮಾಗಳಲ್ಲಿ ನಟ ತಮ್ಮ ನೃತ್ಯದ ಕೌಶಲ್ಯವನ್ನು ತೋರಿದ್ದಾರೆ. ಆದರೆ ತಮ್ಮ ಕಾಲಿಗೆ ಪೆಟಾಗಿದ್ದ ಕಾರಣದಿಂದ ಅವರು ಮಾಸ್ಟರ್ ಪೀಸ್ ನಲ್ಲಿ ನೃತ್ಯದಿಮ್ದ ದೂರ ಉಳಿದಿದ್ದರಂತೆ. "ನನ್ನ ಮಂಡಿನೋವಿನ ಕಾರಣದಿಂದಾಗಿ ನೃತ್ಯದಿಂದ ಕೆಲಕಾಲ ದೂರ ಉಳಿಯಬೇಕಾಗಿ ಬಂತು. ಮೊದಲಿನ ಸ್ಥಿತಿಗೆ ಬರಲು ಇನ್ನೂ ಕೆಲ ಕಾಲ ಹಿಡಿಯುತ್ತದೆ" ಎಂದಿದ್ದಾರೆ. "ಜನರನ್ನು ಥಿಯೇಟರಿಗೆ ಕರೆತರಲು ಒಳ್ಳೆಯ ನಟನೆ ನೀಡಬೇಕು. ನೃತ್ಯ ಗೊತ್ತಿದ್ದರೆ ಅದು ಬೋನಸ್. ವಿವಿಧ ನೃತ್ಯ ಪ್ರಾಕಾರಗಳ ಬಗ್ಗೆ ನನಗೆ ಅಷ್ಟು ಜ್ಞಾನವಿಲ್ಲ. ಎಲ್ಲ ತರಹದ ಡ್ಯಾನ್ಸ್ ಗಳೂ ಇಷ್ಟವಾಗುತ್ತವೆ" ಎನ್ನುತ್ತಾರೆ ಯಶ್.
Advertisement