ಜೈ ಮಾರುತಿ ೮೦೦ಗೆ ಭರದ ಚಿತ್ರೀಕರಣ

ನಿರ್ದೇಶಕ ಹರ್ಷ 'ಜೈ ಮಾರುತಿ ೮೦೦'ರ ಶೇಕಡ ೬೦ ಚಿತ್ರೀಕರಣ ಮುಗಿಸಿದ್ದಾರಂತೆ. "ಈಗ ದೀಪಾವಳಿ ಹಬ್ಬದ ಕಾಲ ಪ್ರಾರಂಭವಾಗುವುದರಿಂದ ಜೈ ಮಾರುತಿ ೮೦೦
ನಿರ್ದೇಶಕ ಹರ್ಷ
ನಿರ್ದೇಶಕ ಹರ್ಷ

ಬೆಂಗಳೂರು: ನಿರ್ದೇಶಕ ಹರ್ಷ 'ಜೈ ಮಾರುತಿ ೮೦೦'ರ ಶೇಕಡ ೬೦ ಚಿತ್ರೀಕರಣ ಮುಗಿಸಿದ್ದಾರಂತೆ. "ಈಗ ದೀಪಾವಳಿ ಹಬ್ಬದ ಕಾಲ ಪ್ರಾರಂಭವಾಗುವುದರಿಂದ ಜೈ ಮಾರುತಿ ೮೦೦ ಸಿನೆಮಾದ ಬಗ್ಗೆ ಕೆಲವು ಸಂಗತಿಗಳನ್ನು ಬಿಚ್ಚಿಡುತ್ತೇನೆ" ಎಂದು ಮಾತಿಗಿಳಿಯುವ ಹರ್ಷ ಫೆಬ್ರವರಿ ೨೦೧೬ರ ಬಿಡುಗಡೆಗೆ ಮುನ್ನೋಡುತ್ತಿದ್ದಾರೆ.

ಭಜರಂಗಿ ಮತ್ತು ವಜ್ರಕಾಯ ಸಿನೆಮಾಗಳನ್ನು ನಿರ್ದೇಶಿಸಿರುವ ಹರ್ಷ "ಈ ಸಿನೆಮಾದಲ್ಲಿ ಹೆಚ್ಚು ಹಾಸ್ಯವಿದೆ. ಹಾಗೆಯೇ ಕಲಾವಿದರ ದಂಡೇ ಇದೆ. ೨೦ ಕಲಾವಿದರಿದ್ದಾರೆ, ಇಬ್ಬರು ಖಳನಾಯಕರು ಜೊತೆಗೆ ಸಾಧು ಕೋಕಿಲಾ, ಅರುಣ್ ಸಾಗರ್, ಜಹಂಗೀರ್, ಕುರಿ ಪ್ರತಾಪ್ ಒಳಗೊಂಡಂತೆ ಹಲವಾರು ಹಾಸ್ಯನಟರಿದ್ದಾರೆ. ಹಾಸ್ಯ ಸಿನೆಮಾದ ಸಣ್ಣ ಎಳೆಯಾಷ್ಟೇ ಇರುವುದಿಲ್ಲ ಬದಲಾಗಿ ಹೆಚ್ಚಿನ ಭಾಗವಾಗಿರುತ್ತದೆ " ಎನ್ನುತ್ತಾರೆ.

ಜಯಣ್ಣ ಕಂಬೈನ್ಸ್ ನಿರ್ಮಿಸುತ್ತಿರುವ ಸಿನೆಮಾಗೆ ಶರಣ್ ನಾಯಕ ನಟ. ಬೆಂಗಳೂರಿನಲ್ಲಿ ಬಹುತೇಕ ಚಿತ್ರೀಕರಣ ನಡೆಸಿರುವ ಹರ್ಷ ಬೆಳಗಾಂನಲ್ಲಿ ೧೦ ದಿನದ ಚಿತ್ರೀಕರಣಕ್ಕೆ ತೆರಳಲಿದ್ದಾರಂತೆ.

ಶೃತಿ ಹರಿಹರನ್ ಮತ್ತು ಶುಭ ಪೂಂಜಾ ಸಿನೆಮಾದಲ್ಲಿ ನಾಯಕಿಯರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com